‘ಎಲ್ಲೆಲ್ಲಿ ಯಾವ ತಿಂಡಿ ಸಿಗುತ್ತೆ ಅನ್ನೋದು ಅವರಿಗೆ ಗೊತ್ತಿತ್ತು’; ಅಪ್ಪು ಬಗ್ಗೆ ಡಾಲಿ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Oct 23, 2022 | 3:39 PM

‘ಅಪ್ಪು ಸರ್​ಗೆ ಆಹಾರದ ಬಗ್ಗೆ ಸಾಕಷ್ಟು ಪ್ರೀತಿ ಇತ್ತು. ಎಲ್ಲೆಲ್ಲಿ ಯಾವ ತಿಂಡಿ ಸಿಗುತ್ತೆ ಅನ್ನೋದು ಅವರಿಗೆ ಗೊತ್ತಿತ್ತು’ ಎಂದು ಹೇಳಿದ್ದಾರೆ ಧನಂಜಯ್.

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರನ್ನು ಕಳೆದುಕೊಂಡು ಒಂದು ವರ್ಷ ಆಗುತ್ತಾ ಬಂದಿದೆ. ಅವರನ್ನು ಫ್ಯಾನ್ಸ್ ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಅನೇಕ ವೃತ್ತ, ಪಾರ್ಕ್ ಹಾಗೂ ರಸ್ತೆಗಳಿಗೆ ಪುನೀತ್ ಹೆಸರನ್ನು ಇಡಲಾಗಿದೆ. ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ‘ಅಪ್ಪು ಫುಡ್​ ಫೆಸ್ಟಿವಲ್​’ ಮಾಡಲಾಗುತ್ತಿದೆ. ಇದಕ್ಕೆ ‘ಹೆಡ್​ ಬುಷ್​’ (Head Bush) ನಾಯಕ ಧನಂಜಯ್ ಆಗಮಿಸಿದ್ದಾರೆ. ಈ ವೇಳೆ ಅವರು ಅಪ್ಪು ಬಗ್ಗೆ ಮಾತನಾಡಿದ್ದಾರೆ. ‘ಅಪ್ಪು ಸರ್​ಗೆ ಆಹಾರದ ಬಗ್ಗೆ ಸಾಕಷ್ಟು ಪ್ರೀತಿ ಇತ್ತು. ಎಲ್ಲೆಲ್ಲಿ ಯಾವ ತಿಂಡಿ ಸಿಗುತ್ತೆ ಅನ್ನೋದು ಅವರಿಗೆ ಗೊತ್ತಿತ್ತು’ ಎಂದು ಹೇಳಿದ್ದಾರೆ ಧನಂಜಯ್.