‘ಕಾಂತಾರ’ ಚಿತ್ರವನ್ನು ಪುನೀತ್ ರಿಜೆಕ್ಟ್ ಮಾಡಿದ್ದೇಕೆ? ಹೊರಬಿತ್ತು ಅಸಲಿ ವಿಚಾರ
‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಮೂಲಕ ರಿಷಬ್ ನಟನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರು ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ.
‘ಕಾಂತಾರ’ ಸಿನಿಮಾ (Kantara Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದ ಮೂಲಕ ರಿಷಬ್ ನಟನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರು ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ. ‘ಒಂದು ದಿನ ಪುನೀತ್ ಅವರಿಗೆ ಕಾಂತಾರದ ಕಥೆ ಹೇಳಿದೆ. ಅವರು ಕಥೆ ಕೇಳಿ ಖುಷಿಪಟ್ಟರು. ಆದರೆ, ಡೇಟ್ಸ್ನ ತೊಂದರೆ ಆಯ್ತು. ಪುನೀತ್ ಆಗ ದ್ವಿತ್ವ ಒಪ್ಪಿಕೊಂಡಿದ್ದರು. ಅದು ಹೊಂಬಾಳೆ ಫಿಲ್ಮ್ಸ್ (Hombale Films) ಅಡಿಯಲ್ಲೇ ಸಿದ್ಧವಾಗಬೇಕಿದ್ದ ಸಿನಿಮಾ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ದೈವದ ವಿಚಾರ ಎಂದಾಗ ಅವರಿಗೆ ಕೊಂಚ ಕಾಳಜಿ ಬಂದಿರಬಹುದು. ಈ ಎಲ್ಲಾ ಕಾರಣದಿಂದ ಅವರು ಸಿನಿಮಾ ಮಾಡಿಲ್ಲ’ ಎಂದು ರಿಷಬ್ ಮಾಹಿತಿ ನೀಡಿದ್ದಾರೆ.