‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?

|

Updated on: Jun 29, 2024 | 7:49 AM

ದರ್ಶನ್ ಪ್ರಕರಣದಲ್ಲಿ ಅನೇಕರು ಮೌನ ತಾಳಿದ್ದಾರೆ. ಅವರನ್ನು ಮಗ ಎಂದೇ ಕರೆಯುತ್ತಿದ್ದ ಸುಮಲತಾ ಅಂಬರೀಷ್​ ಈಗ ಮೌನ ತಾಳಿದ್ದಾರೆ. ರಾಕ್​ಲೈನ್ ವೆಂಕಟೇಶ್ ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಈ ಮೌನ ಏಕೆ ಎಂಬ ಪ್ರಶ್ನೆಗೆ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿದ್ದಾರೆ.

ದರ್ಶನ್ ಪ್ರಕರಣದಲ್ಲಿ ಅನೇಕರು ಮೌನ ತಾಳಿದ್ದಾರೆ. ದರ್ಶನ್ ಅವರನ್ನು ಮಗ ಎಂದೇ ಕರೆಯುತ್ತಿದ್ದ ಸುಮಲತಾ ಅಂಬರೀಷ್​ ಅವರು ಮೌನ ತಾಳಿದ್ದಾರೆ. ರಾಕ್​ಲೈನ್ ವೆಂಕಟೇಶ್ ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಈ ಮೌನ ಏಕೆ ಎಂಬ ಪ್ರಶ್ನೆಗೆ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿದ್ದಾರೆ. ‘ಮೊದಲು ಮುಂದೆ ಬರಬೇಕಾಗಿದ್ದು ಕಲಾವಿದರ ಸಂಘ. ಎಲ್ಲರಿಗೂ ನೋವಿದೆ. ಆದರೆ, ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದಾರೆ. ಇಡೀ ಚಿತ್ರರಂಗ ಸೇರಬೇಕು. ಎಲ್ಲರೂ ಒಟ್ಟಾಗಿ ಮುಂದೆ ಬರಬೇಕು. ರಾಕ್​ಲೈನ್ ಬಂದಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು’ ಎಂದಿದ್ದಾರೆ ಸಾರಾ ಗೋವಿಂದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.