ಕೊಲ್ಲೂರಿಗೇ ಬಂದು ವಿಜಯಲಕ್ಷ್ಮೀ ಅವರು ನವ ಚಂಡಿಕಾ ಹೋಮ ಮಾಡಿಸಿದ್ದೇಕೆ?

ಕೊಲ್ಲೂರಿಗೇ ಬಂದು ವಿಜಯಲಕ್ಷ್ಮೀ ಅವರು ನವ ಚಂಡಿಕಾ ಹೋಮ ಮಾಡಿಸಿದ್ದೇಕೆ?

ರಾಜೇಶ್ ದುಗ್ಗುಮನೆ
|

Updated on: Jul 26, 2024 | 11:30 AM

ದರ್ಶನ್ ಬೇಗ ಬಿಡುಗಡೆ ಆಗಲಿ ಎಂದು ವಿಜಯಲಕ್ಷ್ಮೀ ಅವರು ದೇವರ ಮೋರೆ ಹೋಗಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿ ದೇವಾಲಯದಲ್ಲಿ ನವ ಚಂಡಿಕಾ ಹೋಮ ಮಾಡಿಸಿದ್ದಾರೆ. ಈ ಪೂಜೆಯ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ.

ವಿಜಯಲಕ್ಷ್ಮೀ ಅವರು ಪತಿ ದರ್ಶನ್ ಅವರನ್ನು ಜೈಲಿನಿಂದ ಹೊರಕ್ಕೆ ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಇದು ಅವರನ್ನು ಸಾಕಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ವಿಜಯಲಕ್ಷ್ಮೀ ಬೇರೆ ಬೇರೆ ದೇವರ ಮೊರೆ ಹೋಗುತ್ತಿದ್ದಾರೆ. ಜೂನ್ 25ರಂದು ಅವರು ಕೊಲ್ಲುರೂ ದೇವಸ್ಥಾನಕ್ಕೆ ತೆರಳಿದ್ದರು. ಇಂದು (ಜುಲೈ 26) ಅವರು ನವಚಂಡಿಕಾ ಯಾಗ ಮಾಡಿಸಿದ್ದಾರೆ. ಆಶಾಢಮಾಸದಲ್ಲಿ ಈ ಪೂಜೆ ಮಾಡಿಸಿರೋದು ಮುಖ್ಯ ಆಗುತ್ತದೆ. ಸಂಕಷ್ಟ ನಿವಾರಣೆ ಈ ಪೂಜೆ ಮಾಡಿಸುತ್ತಾರೆ. ಬೆಳಿಗ್ಗೆ 6.30 ಸುಮಾರಿಗೆ ಪೂಜೆ ಆರಂಭ ಆಗಿದ್ದು, 9.30 ವೇಳೆಗೆ ಪೂಜೆ ಮುಗಿದಿದೆ. ಸಂಕಷ್ಟ ಸಮಯದಲ್ಲಿ ಈ ಪೂಜೆಯನ್ನು ಇಲ್ಲಿ ಮಾಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.