AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಗಿಲ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ನೇರವಾಗಿ ವಿಧಾನ ಸೌಧಕ್ಕೆ ಅಗಮಿಸಿದ ಸಿಎಂ ಸಿದ್ದರಾಮಯ್ಯ

ಕಾರ್ಗಿಲ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ನೇರವಾಗಿ ವಿಧಾನ ಸೌಧಕ್ಕೆ ಅಗಮಿಸಿದ ಸಿಎಂ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 26, 2024 | 11:33 AM

Share

ವಿಧಾನ ಸಭಾ ಅಧಿವೇಶನ ಗುರುವಾರದ ಕಾರ್ಯಕಲಾಪದಲ್ಲಿ ವಿರೋಧಪಕ್ಷದ ನಾಯಕರು ಮುಡಾ ಹಗರಣದ ಮೇಲೆ ಚರ್ಚೆಗಾಗಿ ಗೋಗರೆದರೂ ಸಭಾಪತಿ ಯುಟಿ ಖಾದರ್ ಅವಕಾಶ ನೀಡಿರಲಿಲ್ಲ. ನಂತರ ಅಶೋಕ್ ನೇತೃತ್ವದಲ್ಲಿ ಎನ್​ಡಿಎ ಶಾಸಕರು ರಾಜ್ ಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿಯೊಂದನ್ನು ಸಲ್ಲಿಸಿದ್ದರು.

ಬೆಂಗಳೂರು: ನಿನ್ನೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರಿಂದ ಮುಡಾ ಹಗರಣದ ಮೇಲಿನ ಚರ್ಚೆಗೆ ಹೆದರಿ ಸದನದಿಂದ ಪಲಾಯನಗೈದಿರುವರೆಂದು ಆರೋಪಕ್ಕೊಳಗಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನ ಸೌಧ ಸಮಯಕ್ಕೆ ಮೊದಲೇ ಆಗಮಿಸಿದರು. ಅವರೊಂದಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಹ ಆಗಮಿಸಿದರು. ಮುಖ್ಯಮಂತ್ರಿಯವರು ಮೊಬೈಲ್ ಫೋನಲ್ಲಿ ಯಾರೊಂದಿಗೋ ಮಾತಾಡುತ್ತಿದ್ದ ಕಾರಣ ಅವರಣದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಡಿಸ್ಟರ್ಬ್ ಮಾಡುವ ಪ್ರಯತ್ನ ಮಾಡಲಿಲ್ಲ. ಇವತ್ತು ಕಾರ್ಗಿಲ್ ವಿಜಯ್ ದಿವಸ್ ಆಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದರು. ಪರಮೇಶ್ವರ್, ಹಲವಾರು ಮಿಲಿಟರಿ ಅಧಿಕಾರಿಗಳು ಮತ್ತು ಹುತಾತ್ಮರ ಕುಟುಂಬಗಳ ಸದಸ್ಯರು ಈ ಸಂದರ್ಭದಲ್ಲಿ ಸ್ಮಾರಕದ ಬಳಿ ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾರ್ಗಿಲ್​ ವೀರರೊಂದಿಗೆ ಪ್ರಧಾನಿ ಮೋದಿ, ಅಂದಿನ ವಿಜಯ ಗಾಥೆಯನ್ನು ನೆನೆದ ಮೋದಿ ಆರ್ಕೈವ್​