AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಗಿಲ್​ ವೀರರೊಂದಿಗೆ ಪ್ರಧಾನಿ ಮೋದಿ, ಅಂದಿನ ವಿಜಯ ಗಾಥೆಯನ್ನು ನೆನೆದ ಮೋದಿ ಆರ್ಕೈವ್​

ಇಂದು ಕಾರ್ಗಿಲ್ ವಿಜಯ್ ದಿವಸ್, ಭಾರತದ ಇತಿಹಾಸದಲ್ಲಿ ಜುಲೈ 26 ಎಂಬುದು ಎಂದೂ ಮರೆಯಲಾರದ ದಿನ. ಪಾಕಿಸ್ತಾನಿ ಪಡೆಗಳು ಭಾರತದ ಭೂ ಪ್ರದೇಶಕ್ಕೆ ನುಸುಳಿದ್ದ ಸಂದರ್ಭ. ಭಾರತವು ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿತ್ತು. ಭಾರತೀಯ ಸೇನೆಯು ಭೀಕರ ಯುದ್ಧವನ್ನು ನಡೆಸಿತು, ಪ್ರತಿ ಇಂಚು ಭೂಮಿಯನ್ನೂ ಪುನಃ ಪಡೆದುಕೊಂಡಿತು. ನಮ್ಮ ರಾಷ್ಟ್ರದ ಸಮಗ್ರತೆಯನ್ನು ಭದ್ರಪಡೆಸಿತು.

ಕಾರ್ಗಿಲ್​ ವೀರರೊಂದಿಗೆ ಪ್ರಧಾನಿ ಮೋದಿ, ಅಂದಿನ ವಿಜಯ ಗಾಥೆಯನ್ನು ನೆನೆದ ಮೋದಿ ಆರ್ಕೈವ್​
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Jul 26, 2024 | 11:23 AM

Share

ಭಾರತದ ಇತಿಹಾಸದಲ್ಲಿ ಜುಲೈ 26 ಎಂಬುದು ಎಂದೂ ಮರೆಯಲಾರದ ದಿನ. ಪಾಕಿಸ್ತಾನಿ ಪಡೆಗಳು ಭಾರತದ ಭೂ ಪ್ರದೇಶಕ್ಕೆ ನುಸುಳಿದ್ದ ಸಂದರ್ಭ. ಭಾರತವು ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿತ್ತು. ಭಾರತೀಯ ಸೇನೆಯು ಭೀಕರ ಯುದ್ಧವನ್ನು ನಡೆಸಿತು, ಪ್ರತಿ ಇಂಚು ಭೂಮಿಯನ್ನೂ ಪುನಃ ಪಡೆದುಕೊಂಡಿತು. ನಮ್ಮ ರಾಷ್ಟ್ರದ ಸಮಗ್ರತೆಯನ್ನು ಭದ್ರಪಡಿಸಿತು. ಇದನ್ನು ಮೋದಿ ಆರ್ಕೈವ್​ ನೆನಪಿಸಿಕೊಂಡಿದೆ.

ಅಂತಹ ಒಂದು ಯುದ್ಧ ಭೂಮಿ ಟೈಗರ್ ಹಿಲ್ ಆಗಿತ್ತು, ಇದು ಯುದ್ಧದ ಅತ್ಯಂತ ತೀವ್ರವಾದ ಹೋರಾಟವನ್ನು ಕಂಡ ಒಂದು ಕಾರ್ಯತಂತ್ರದ ಪಾಯಿಂಟ್ ಕೂಡಾ ಆಗಿತ್ತು. ಜುಲೈ 4, 1999ರಂದು ಪಟ್ಟುಬಿಡದ ಮತ್ತು ರಕ್ತಸಿಕ್ತ ಯುದ್ಧದ ನಂತರ ಭಾರತೀಯ ಪಡೆಗಳು ಟೈಗರ್ ಹಿಲ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಿದವು.

ಈ ವಿಜಯವು ಜುಲೈ 26, 1999 ರಂದು ಭಾರತೀಯ ಭೂಪ್ರದೇಶದಿಂದ ಒಳನುಗ್ಗುವ ಪಾಕಿಸ್ತಾನಿಗಳನ್ನು ಅಂತಿಮವಾಗಿ ಹೊರಗಟ್ಟಲಾಯಿತು ಎಂದು ಮೋದಿ ಆರ್ಕೈವ್​ನಲ್ಲಿ ಬರೆಯಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ಜುಲೈ 26, 1999 ರಂದು, ಪಾಕಿಸ್ತಾನಿ ಸೇನೆಯನ್ನು ಓಡಿಸುವಾಗ ಭಾರತೀಯ ಸೇನೆಯು ಕಾರ್ಗಿಲ್‌ನಲ್ಲಿ ವಿಜಯದ ತ್ರಿವರ್ಣ ಧ್ವಜವನ್ನು ಹಾರಿಸಿತು. ಅಂದಿನಿಂದ, ಪ್ರತಿ ವರ್ಷ ಜುಲೈ 26 ರಂದು ಭಾರತವು “ಕಾರ್ಗಿಲ್ ವಿಜಯ್ ದಿವಸ್” ಅನ್ನು ಆಚರಿಸುತ್ತದೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲೇಹ್ ಹೆದ್ದಾರಿಯಲ್ಲಿರುವ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮತ್ತಷ್ಟು ಓದಿ: Kargil Vijay Diwas: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಇಂದಿಗೂ ಸಹ, ಕಾರ್ಗಿಲ್ ಯುದ್ಧ ಸ್ಮಾರಕವನ್ನು ನೋಡಲು ಪ್ರವಾಸಿಗರು ದೂರದೂರುಗಳಿಂದ ಆಗಮಿಸುತ್ತಾರೆ ಮತ್ತು ನಮ್ಮ ದೇಶದ ವೀರರು ಹೇಗೆ ಶೌರ್ಯವನ್ನು ಪ್ರದರ್ಶಿಸಿ ಹುತಾತ್ಮರಾದರು. ಇಲ್ಲಿ ಯಾರೇ ಬಂದರೂ ಅವರ ಕಣ್ಣುಗಳು ತೇವವಾಗುತ್ತವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ