ಅಂದು ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಭೇಟಿಯಾಗಿ ಉತ್ಸಾಹ ಹೆಚ್ಚಿಸಿದ್ದ ಪ್ರಧಾನಿ ಮೋದಿ
ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾರ್ಗಿಲ್ನಲ್ಲಿ ಅಂದು ನಡೆದ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಅವರ ಉತ್ಸಾಹವನ್ನು ಹೆಚ್ಚಿಸುವ ಕೆಲಸ ಮಾಡಿದ್ದರು ಎಂದು ನಿವೃತ್ತ ಜನರಲ್ ವಿಜಯ್ ಜೋಶಿ ನೆನಪಿಸಿಕೊಂಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾರ್ಗಿಲ್ನಲ್ಲಿ ಅಂದು ನಡೆದ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಅವರ ಉತ್ಸಾಹವನ್ನು ಹೆಚ್ಚಿಸುವ ಕೆಲಸ ಮಾಡಿದ್ದರು ಎಂದು ನಿವೃತ್ತ ಮೇಜರ್ ಜನರಲ್ ವಿಜಯ್ ಜೋಶಿ ನೆನಪಿಸಿಕೊಂಡಿದ್ದಾರೆ.
1999ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದಾಗ, ಉಧಮ್ಪುರ ಕಮಾಂಡ್ ಆಸ್ಪತ್ರೆಯಲ್ಲಿ ಗಾಯಗೊಂಡ ಸೈನಿಕರ ಆರೋಗ್ಯ ವಿಚಾರಿಸಿದ್ದರು. ಅಂದು ಮೋದಿ ಜತೆಗೆ ಮೇಜರ್ ಜನರಲ್ ವಿಜಯ್ ಜೋಶಿ(ನಿವೃತ್ತ) ಕೂಡ ಇದ್ದರು. ಅದು ಭಾರತಕ್ಕೊಂದು ಐತಿಹಾಸಿಕ ಸಂದರ್ಭ ಎಂದೇ ಹೇಳಬಹುದು.
ಇಂದು 25ನೇ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸುತ್ತಿದ್ದೇವೆ. ನಮ್ಮ ಸೈನಿಕರ ತ್ಯಾಗ, ಬಲಿದಾನ, ಶೈರ್ಯಕ್ಕೆ ರಾಷ್ಟ್ರವು ಗೌರವ ಸಲ್ಲಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ದ್ರಾಸ್ಗೆ ಭೇಟಿ ನೀಡಿ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ಮತ್ತಷ್ಟು ಓದಿ: ಕಾರ್ಗಿಲ್ ವೀರರೊಂದಿಗೆ ಪ್ರಧಾನಿ ಮೋದಿ, ಅಂದಿನ ವಿಜಯ ಗಾಥೆಯನ್ನು ನೆನೆದ ಮೋದಿ ಆರ್ಕೈವ್
ಈ ಸಂದರ್ಭದಲ್ಲಿ ಉಧಂಪುರದ ಮಿಲಿಟರಿ ಕಮಾಂಡ್ ಆಸ್ಪತ್ರೆಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ ಮೇಜಯ್ ಜನರಲ್ ವಿಜಯ್ ಜೋಶಿ ಅವರು 1999ರಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಅವರು ಗಾಯಗೊಂಡ ಮತ್ತು ಯುದ್ಧದಲ್ಲಿ ದಣಿದ ಸೈನಿಕರನ್ನು ಭೇಟಿ ಮಾಡಿದ್ದ ದಿನವನ್ನು ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಸೈನಿಕರಲ್ಲಿ ಹೊಸ ಉತ್ಸಾಹವನ್ನುಂಟು ಮಾಡಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ಎಲ್ಲರನ್ನೂ ನಿರಾಳವಾಗಿಡುವ ಮೋದಿಯವರ ಅದ್ವಿತೀಯ ಸಾಮರ್ಥ್ಯವನ್ನು ಜೋಶಿ ಕೊಂಡಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Fri, 26 July 24




