ಕಾರ್ಗಿಲ್ ಯುದ್ಧ ಆರಂಭವಾಗಿದ್ದು ಈ ವ್ಯಕ್ತಿಯಿಂದ, ಆ ಮಾಸ್ಟರ್ ಮೈಂಡ್ ಯಾರು?
1999ರ ಮೇ ತಿಂಗಳಲ್ಲಿ ಆರಂಭವಾದ ಈ ಯುದ್ದ ಭಾರತ ಕ್ಕೆ ಆಶ್ಚರ್ಯವನ್ನುಂಟು ಮಾಡಿತ್ತು. ಭಾರತೀಯ ವೀರ ಯೋಧರ ಸೇನೆಯು ಯಾವುದೇ ಆತಂಕಕ್ಕೆ ಒಳ ಗಾಗದೇ ಪಾಕಿಸ್ತಾನವನ್ನು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ವೀರ ಮರಣವನ್ನು ಹೊಂದಿದರು.

ಕಾರ್ಗಿಲ್ ಯುದ್ಧಕ್ಕೆ ಇಂದಿಗೆ 25ನೇ ವರ್ಷ . ಪಾಕಿಸ್ತಾನ ಸೈನಿಕರ ಹುಟ್ಟುಡಗಿಸಿ ಭಾರತೀಯ ಸೈನಿಕರು ವಿಜಯ ಪತಾಕೆ ಹಾರಿಸಿದ ದಿನ. ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದಾಗಿದೆ. ಪ್ರತಿ ವರ್ಷ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಯುದ್ದದ ಯಶಸ್ಸಿನ ಸ್ಮರಣಾರ್ಥಕವಾಗಿ ಆಚರಿಸಲಾಗುತ್ತದೆ. ಕಾರ್ಗಿಲ್ ವಿಜಯ್ ದಿವಸ್ ಅನ್ನು ಕಾರ್ಗಿಲ್ ಯುದ್ಧ ವೀರರ ಗೌರವಾರ್ಥವಾಗಿ ಆಚರಿಸಲಾಗುತ್ತಿದೆ.
1999ರ ಮೇ ತಿಂಗಳಲ್ಲಿ ಆರಂಭವಾದ ಈ ಯುದ್ದ ಭಾರತ ಕ್ಕೆ ಆಶ್ಚರ್ಯವನ್ನುಂಟು ಮಾಡಿತ್ತು. ಭಾರತೀಯ ವೀರ ಯೋಧರ ಸೇನೆಯು ಯಾವುದೇ ಆತಂಕಕ್ಕೆ ಒಳ ಗಾಗದೇ ಪಾಕಿಸ್ತಾನವನ್ನು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ವೀರ ಮರಣವನ್ನು ಹೊಂದಿದರು.
ಪಾಕಿಸ್ತಾನದ ಕುತಂತ್ರ ಬುದ್ದಿ.
ಚಳಿಗಾಲದಲ್ಲಿ ಕಾಶ್ಮೀರದ ಪರ್ವತ ಪ್ರದೇಶದಲ್ಲಿ ರಾತ್ರಿ ಕಡುಶೀತ ವಾತಾವರಣವಿರುತ್ತದೆ.ಮೈಕೊರೆಯುವಂತಹ ಚಳಿ ಅಲ್ಲಿ ಇರುತ್ತದೆ. 10 ಡಿಗ್ರಿ ತಾಪಮಾನಕ್ಕೆ ಚಳಿಯೆಂದು ನಾವುಗಳು ಒದ್ದಾಡುತ್ತೇವೆ. ಆದರೆ ನಮ್ಮ ಸೈನಿಕರು ಇರುವ ಆ ಪ್ರದೇಶದಲ್ಲಿ ಮೈನಸ್ ಡಿಗ್ರಿ ಚಳಿಯಿರುತ್ತದೆ. ಈ ಮೈ ಕೊರೆಯುವ ಚಳಿಯಿರುವಾಗ ಗಡಿ ನಿಯಂತ್ರಣ ರೇಖೆಯ ಆಯ ಬದಿಗಳಲ್ಲಿ ಕೆಲವು ಶಿಬಿರಗಳನ್ನು ಭಾರತ ಪಾಕಿಸ್ತಾನ, ತೊರೆಯುವುದು ವಾಡಿಕೆ. ಆದರೆ 1999ರ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನ ಸೇನೆಯು ತನ್ನ ಕುತಂತ್ರ ಬುದ್ಧಿ ಉಪಯೋಗಿಸಿ. ಗಡಿ ನಿಯಂತ್ರಣ ರೇಖೆಯ ಭಾರತದ ಬದಿಯಲ್ಲಿರುವ ಶಿಬಿರಗಳ ಮೇಲೆ ದಾಳಿ ನಡೆಸಲು ತನ್ನ ಪಡೆಗಳನ್ನು ಕಳಿಸಿತು. ಇದು ಭಾರತ-ಪಾಕ್ ಯುದ್ಧಕ್ಕೆ ನಾಂದಿ ಹಾಡಿತು.
ಮುಷರ್ರಫ್ ಮಾಸ್ಟರ್ ಮೈಂಡ್
ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೊಂದಿಗೆ ಶಾಂತಿ ಮಂತ್ರವನ್ನು ಪ್ರಸ್ತಾಪಿಸಿದ್ದರು ಅದನ್ನು ಧಿಕ್ಕರಿಸಿ ಪಾಕಿಸ್ತಾನವು ಜನರಲ್ ಪರ್ವೇಜ್ ಮುಷರ್ರಫ್‌ನ ‘ಮಾಸ್ಟರ್ ಮೈಂಡ್’ನಿಂದ ಯುದ್ದ ಆರಂಭವಾಯಿತು.ಕಾಶ್ಮಿರದಲ್ಲಿ ಒಳನುಗ್ಗುವ ಯೋಜನೆಯನ್ನು ತುಂಬ ನಾಜೂಕಾಗಿ ಮುಷರ್ರಫ್ ಯೋಜಿಸಿದ್ದರು. ವಿಶೇಷ ಎಂದರೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಅತೀ ಹೆಚ್ಚು ಶಸ್ತ್ರಾಸ್ತಗಳನ್ನು ಬಳಕೆ
ಎರಡನೇ ಮಹಾ ಯುದ್ದದ ಬಳಿಕ ಅಪಾರ ಶಸ್ತ್ರಾಸ್ತ ಬಳಸಿದ ಯುದ್ಧ ಇದಾಗಿದೆ. ಈ ಯುದ್ದದಲ್ಲಿ ಎರಡೂ ದೇಶಗಳಲ್ಲಿ ಸಾಕಷ್ಟು ಸೈನಿಕರು ಪ್ರಾಣ ಕಳೆದುಕೊಂಡರು. ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಯೋಧರು ಹುತಾತ್ಮರಾದರು. ಸತತ ಹೋರಾಟದ ಫಲವಾಗಿ ಟೋಲೊಲಿಂಗ್ ಭಾರತದ ವಶವಾಯಿತು. ಹಾಗೂ ಮೊದಲ ಬಾರಿ ದೂರದರ್ಶನ ದಲ್ಲಿ ಪ್ರಸಾರವಾದ ಯುದ್ದ ಇದಾಗಿದೆ.
ಇದನ್ನೂ ಓದಿ: ಕಾರ್ಗಿಲ್ ವೀರರೊಂದಿಗೆ ಪ್ರಧಾನಿ ಮೋದಿ, ಅಂದಿನ ವಿಜಯ ಗಾಥೆಯನ್ನು ನೆನೆದ ಮೋದಿ ಆರ್ಕೈವ್
ಭಾರತ ಪಾಕಿಸ್ತಾನಕ್ಕೆ ಸೋಲು ಉಣಿಸಿತು.
ಪಾಕಿಸ್ತಾನವು ಆಕ್ರಮಿಸಿಕೊಂಡಿದ್ದ ಅನೇಕ ಶಿಖರಗಳನ್ನು ಭಾರತದ ಪಡೆಗಳು ಮರುವಶಕ್ಕೆ ಪಡೆದುಕೊಂಡಿತು. ಆಕ್ರಮಿತ ಪ್ರದೇಶದ ಅಂದಾಜು ಶೇ.80ರಷ್ಟು ಭಾಗ ಭಾರತದ ಸ್ವಾಧೀನವಾದವು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನದ ಮೇಲೆ ಒತ್ತಡ ಬಿದ್ದ ಕಾರಣ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಯಾಚೆಗೆ ತನ್ನ ಪಡೆಗಳನ್ನು ಹಿಂಪಡೆಯಿತು. ಅಷ್ಟರಲ್ಲಿಯೇ ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತು. ಹಾಗಾಗಿ ಯುದ್ಧದಲ್ಲಿ ಸತ್ತ ಪಾಕ್ ಸೈನಿಕರನ್ನು ಸಹ ಸ್ವೀಕರಿಸಲೂ ಪಾಕ್ ನಿರಾಕರಿಸಿತು. 1999 ಜುಲೈ 26 ರಂದು ಭಾರತ ಪಾಕಿಸ್ತಾನದ ವಿರುದ್ಧ ಸಾರಿದ ಸಮರದಲ್ಲಿ ಸಂಪೂರ್ಣ ಜಯಶಾಲಿಯಾಯಿತು. ಈ ಗೆಲುವನ್ನು ಸ್ಮರಣೆ ಮಾಡಲು ಕಾರ್ಗಿಲ್ ವಿಜಯ್ ದಿವಸ್ ಅಥವಾ ಅಪರೇಶ್ ನ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ.
ಐಶ್ವರ್ಯ ಕೋಣನ
ವಿಜಯ ನಗರ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




