ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ಭೀತಿಗೊಳಿಸುವ ವಿಡಿಯೋ ಇಲ್ಲಿದೆ
ಬೆಂಗಳೂರು ನಗರದ ಲಗ್ಗೆರೆ ಪಾರ್ವತಿನಗರದ ಕಟ್ಟಡದ ಮೇಲೆ ನಿರ್ಮಿಸಿದ್ದ ಮೊಬೈಲ್ ಟವರ್ ಇದೀಗ ಏಕಾಏಕಿಯಾಗಿ ಧರೆಗುರುಳಿದೆ. ಟವರ್ ಇದ್ದ ಮನೆ ಪಕ್ಕದಲ್ಲಿ ಕಟ್ಟಡ ಕಾಮಗಾರಿ ವೇಳೆ ಈ ಘಟನೆ ನಡೆದಿದೆ. ಮೊಬೈಲ್ ಟವರ್ ಪಕ್ಕದ ಬಿಲ್ಡಿಂಗ್ನಲ್ಲಿದ್ದ 11 ಜನರು ಬಚಾವ್ ಆಗಿದ್ದಾರೆ.
ಬೆಂಗಳೂರು, ಡಿ.8: ಕಟ್ಟಡವೊಂದರ ಮೇಲೆ ಇದ್ದ ಮೊಬೈಲ್ ಟವರ್ ಏಕಾಏಕಿಯಾಗಿ ಧರೆಗುರುಳಿದ ಘಟನೆ ನಗರದ (Bengaluru) ಲಗ್ಗೆರೆಯ ಪಾರ್ವತಿನಗರದಲ್ಲಿ ನಡೆದಿದೆ. ಟವರ್ ಇದ್ದ ಕಟ್ಟಡದ ಪಕ್ಕದಲ್ಲಿ ಹೊಸ ಮನೆ ನಿರ್ಮಾಣಕ್ಕಾಗಿ ಹಳೆ ಮನೆಯನ್ನು ಜೆಸಿಬಿ ಮೂಲಕ ಕೆಡವುತ್ತಿದ್ದಾಗ ಮೊಬೈಲ್ ಟವರ್ ಧರೆಗುರುಳಿದೆ. ಮೊಬೈಲ್ ಟವರ್ ಪಕ್ಕದ ಬಿಲ್ಡಿಂಗ್ನಲ್ಲಿದ್ದ 11 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟವರ್ ಬೀಳುವ ಮುನ್ಸೂಚನೆ ಪಡೆದ ಜನರು ಕೂಡಲೇ ಎಚ್ಚೆತ್ತು ಕಟ್ಟಡದಲ್ಲಿ ವಾಸಿಸುತ್ತಿದ್ದ ಎಲ್ಲರನ್ನೂ ಹೊರ ಕರೆದಿದ್ದಾರೆ. ನಂತರದ ಕೆಲವೇ ಕ್ಷಣಗಳಲ್ಲಿ ಟವರ್ ಕುಸಿದು ಬಿದಿದ್ದು, ಒಂದು ಹಣ್ಣಿನ ಅಂಗಡಿ ಮತ್ತು ಬಂಬು ಅಂಗಡಿಗೆ ಹಾನಿಯಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Dec 08, 2023 03:04 PM