ಗುತ್ತಿಗೆದಾರರ ವಿರುದ್ಧ ಕ್ರಮ: BBMP ನರ್ಸರಿ ಶಾಲಾ ಕಟ್ಟಡ ಕುಸಿತದ ಬಗ್ಗೆ ಮಧು ಬಂಗಾರಪ್ಪ ಪ್ರತಿಕ್ರಿಯೆ
ಬೆಂಗಳೂರಿನ ಶಿವಾಜಿನಗರದಲ್ಲಿ ನರ್ಸರಿ ಶಾಲೆ ಕಟ್ಟಡ ಕುಸಿದುಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕುಸಿತಕ್ಕೆ ಕಾರಣ ತಿಳಿದಿಲ್ಲ. ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು, ನ.27: ಶಿವಾಜಿನಗರದಲ್ಲಿ ನರ್ಸರಿ ಶಾಲೆ ಕಟ್ಟಡ ಕುಸಿತ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಯಾವ ಕಾರಣದಿಂದ ಘಟನೆ ನಡೆದಿದೆ ಎಂದು ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ ಎಂದರು.
ಗುತ್ತಿಗೆದಾರರ ವಿರುದ್ಧ ಕಾನೂನು ಅಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ ಮಧು ಬಂಗಾರಪ್ಪ, ಯಾವ ರೀತಿಯಲ್ಲಿ ಕಟ್ಟಡ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು.
ಯಾರಿಗಾದರೂ ಅನಾಹುತವಾದಾಗ ಪರಿಹಾರ ನೀಡುತ್ತೇವೆ, ಇದುವೇ ಪರಿಹಾರ ಅಲ್ಲ. ಇಂತಹ ಸಂದರ್ಭ ಮರುಕಳಿಸದಂತೆ ನೋಡಿ ಕೊಳ್ಳಬೇಕು. ಸಾರ್ವಜನಿಕರ ಯಾವುದೇ ಕಟ್ಟಡವಾಗಲಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಕಟ್ಟಡಗಳು ಶಿಥಿಲಗೊಂಡಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಮೊದಲು ನೋಡಬೇಕು, ನಂತರ ಶಿಕ್ಷಣ ಎಂದರು.
ಶಾಲಾ ಕಾಲೇಜು ಕಟ್ಟಡಗಳ ನಿರ್ಮಾಣವನ್ನ ಸರ್ಕಾರದಿಂದ ನಿಲ್ಲಿಸಲಾಗಿತ್ತು. ಕಟ್ಟಡ ಕಾಮಗಾರಿಗಳನ್ನ ಹೊಸ ಸರ್ಕಾರ ಬಂದ ತಕ್ಷಣ ನಿಲ್ಲಿಸಲಾಗಿತ್ತು. ಆದರೆ ಇವಾಗ ಹಣ ಬಿಡುಗಡೆ ಮಾಡಲಾಗಿದೆ. ಇವಾಗ ಯಾವುದೇ ಸಮಸ್ಯೆ ಇಲ್ಲ, 8500 ಕಟ್ಟಡಗಳ ಕಾಮಗಾರಿ ಕೆಲಸ ಆರಂಭವಾಗಿದೆ. ಇಂತಹ ಹೇಳಿಕೆಗಳು ವಿರೋಧ ಪಕ್ಷಗಳಿಂದ ಬರುವುದು ಸಹಜ ಎಂದರು.
ಇದನ್ನೂ ಓದಿ: ಸಚಿವ ಮಧು ಬಂಗಾರಪ್ಪ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ, ಕಾಂಗ್ರೆಸ್ ಪಕ್ಷದ ವಿರುದ್ಧ ಪೋಸ್ಟ್
ಯಾವುದೇ ಕೊರತೆಯಿಲ್ಲ, ಉತ್ತಮ ಯೋಜನೆಯನ್ನು ಕೊಟ್ಟಿದ್ದೇವೆ ಅದಕ್ಕೂ ದುಡ್ಡಿದೆ. ಸರ್ಕಾರ ಬದಲಾವಣೆ ಆದ ಕೂಡಲೇ ಅನುದಾನವನ್ನು ನಿಲ್ಲಿಸಲಾಗಿತ್ತು. ಯಾವ ಕಟ್ಟಡ ಕಾಮಗಾರಿ ಆರಂಭವಾಗಿಲ್ಲವೋ ಅದನ್ನ ತಡೆಹಿಡಿಯಿರಿ. ಕಾಮಗಾರಿ ನಡೆಯುತ್ತಿರುವುದನ್ನ ಮುಂದುವರೆಸಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇವಾಗ ಎಲ್ಲಾ ಕಾಮಗಾರಿ ಆರಂಭವಾಗಿದೆ ಎಂದರು.
ದುಡ್ಡು ನಮ್ಮ ಇಲಾಖೆಯಲ್ಲಿ ಇದೆ, ಯಾವುದೇ ಸಮಸ್ಯೆ ಇಲ್ಲ. ಸಿದ್ದರಾಮಯ್ಯ ಅವರು ಎಲ್ಲಾ ಕಾಮಗಾರಿಗಳಿಗೂ ಅನುಮತಿ ನೀಡಿದ್ದಾರೆ. ವಿರೋಧ ಪಕ್ಷಗಳು ಬಹಳ ಅವಸರದಲ್ಲಿದ್ದಾರೆ. ಅವರು ಗೆದ್ದ ಕೂಡಲೇ ಎಲ್ಲವನ್ನು ಮಾಡಿದ್ದಾರಾ? ಎಂದರು.
ಇದು ಜನತಾದರ್ಶನವಲ್ಲ ಬೋಗಸ್ ದರ್ಶನ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ, ಈ ರೀತಿ ಮಾತನಾಡುತ್ತಿದ್ದಕ್ಕೆ ಬಿಜೆಪಿಯವರನ್ನು ಜನ ಸೋಲಿಸಿದ್ದಾರೆ. ಈ ಬೋಗಸ್ ಹಿಂದುತ್ವವಾದಿಗಳು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಜನ ಉಟಕ್ಕಾಗಿ ಕಾಯುತ್ತಾರೆ, ಸಮಸ್ಯೆ ಪರಿಹಾರಕ್ಕಾಗಿ ಕಾಯುತ್ತಾರೆ. ಸರ್ಕಾರ ಕೊಡಲಿಲ್ಲ ಅಂದರೆ ಜನ ಜಾಡಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಆರು ತಿಂಗಳ ನಂತರ ವಿಪಕ್ಷ ನಾಯಕ, ಅಧ್ಯಕ್ಷರ ನೇಮಕ ಮಾಡಿದ್ದಾರೆ. ಇನ್ನೂ ಸ್ಪಲ್ಪ ದಿನ ಹೊಸಬರ ಆರ್ಭಟ ಇರುತ್ತೆ. ಜನತಾದರ್ಶನದ ಮೂಲಕ ಜನರ ಸಮಸ್ಯೆ ಪರಿಹರಿಸಲಾಗುವುದು. ಜನರ ಸಮಸ್ಯೆ ಆಲಿಸುವುದು ಕಾಂಗ್ರೆಸ್ ಸರ್ಕಾರದ ಸಂಪ್ರದಾಯ. ಜನರ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ ಹೇಳಬೇಕು. ಮತ ಪಡೆದ ಮೇಲೆ ಜನರ ಮನೆ ಬಾಗಿಲಿಗೆ ಹೋಗೋದು ನಮ್ಮ ಕರ್ತವ್ಯ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ