ರಾಯಲ್ ಎನ್ಫೀಲ್ಡ್ ಮತ್ತು ಕೆಟಿಎಮ್ 250 ಒಂದಿಗೆ ಸ್ಪರ್ಧೆಗೆ ಬೀಳಲು ಬಂತು ಹಿರೋ ಎಕ್ಸ್ಪಲ್ಸ್ 200 4ವಿ!
ರಾಯಲ್ ಎನ್ಫೀಲ್ಡ್ ಹಿಮಾಲಯನ್ ಮತ್ತು ಕೆಟಿಎಮ್ 250 ಅಡ್ವೆಂಚರ್ ಬೈಕ್ಗಳಿಗೆ ಸೆಡ್ಡು ಹೊಡೆಯಲಿರುವುದರಿಂದ ಹಿರೋ ಎಕ್ಸ್ಪಲ್ಸ್ 200 4ವಿ ಹೆಚ್ಚಿನ ಸಾಮರ್ಥ್ಯದ ಆಫ್-ರೋಡರ್ ಆಗಿದೆ.
ರಾಯಲ್ ಎನ್ಫೀಲ್ಡ್ ಹಿಮಾಲಯನ್ ಮತ್ತು ಕೆಟಿಎಮ್ 250 ಅಡ್ವೆಂಚರ್ ಬೈಕ್ಗಳಿಗೆ ಪ್ರತಿಸ್ಪರ್ಧಿಯಾಗಿ ಹಿರೋ ಮೊಟೊಕಾರ್ಪ್ ತನ್ನ ಹೊಸ ಹಿರೋ ಎಕ್ಸ್ಪಲ್ಸ್ 200 4ವಿಯನ್ನು ಲಾಂಚ್ ಮಾಡಿದೆ ಮಾರಾಯ್ರೇ. ಹೊಸ ಹಿರೋ ಎಕ್ಸ್ಪಲ್ಸ್200 4ವಿ ಬೈಕ್ ಹಿರೋ ಹೊಂಡ ಎಕ್ಸ್ಪಲ್ಸ್200 ಎಸ್ ಮತ್ತು ಹಿರೋ ಎಕ್ಸ್ಪಲ್ಸ್ ಟಿ ಕಂಪನಿಯ ಎಕ್ಸ್ಪಲ್ಸ್ ರೇಂಜಿನ ಶ್ರೇಣಿಗೆ ಸೇರ್ಪಡೆಯಾಗುತ್ತಿದೆ. 2021 ಹಿರೋ ಎಕ್ಸ್ಪಲ್ಸ್ 200 4ವಿ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಅವಗಳಲ್ಲಿ ಪ್ರಮುಖ ಆಕರ್ಷಣೆ ಎಂದರೆ, ಎಕ್ಸ್ಪಲ್ಸ್200 ಆವೃತ್ತಿ ಬೈಕ್ಗಳಿಗಿಂತ ಶೇಕಡಾ 6 ರಷ್ಟು ಹೆಚ್ಚು ಬಲ ನೀಡುವ ಮತ್ತು 5 ಪರ್ಸೆಂಟ್ ನಷ್ಟು ಹೆಚ್ಚುವರಿ ಟಾರ್ಕ್ ಉತ್ಪಾದಿಸುವ 4-ವಾಲ್ವ್ ಇಂಜಿನ್ ಅನ್ನು ಇದರಲ್ಲಿ ಅಳವಡಿಸಿರೋದು. ರಾಯಲ್ ಎನ್ಫೀಲ್ಡ್ ಹಿಮಾಲಯನ್ ಮತ್ತು ಕೆಟಿಎಮ್ 250 ಅಡ್ವೆಂಚರ್ ಬೈಕ್ಗಳಿಗೆ ಸೆಡ್ಡು ಹೊಡೆಯಲಿರುವುದರಿಂದ ಹಿರೋ ಎಕ್ಸ್ಪಲ್ಸ್ 200 4ವಿ ಹೆಚ್ಚಿನ ಸಾಮರ್ಥ್ಯದ ಆಫ್-ರೋಡರ್ ಆಗಿದೆ.
ಅಂದಹಾಗೆ ಹಿರೋ ಎಕ್ಸ್ಪಲ್ಸ್ 200 4ವಿ ಬೆಲೆ ಎಷ್ಟಿರಬಹುದೆಂದು ತಿಳಿದುಕೊಳ್ಳುವುದು ಸಹ ಅವಶ್ಯಕವಾಗಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ 1,28,150 ರೂ. ಆಗಿದೆ.
ಆಗಲೇ ಹೇಳಿದ ಹಾಗೆ ಹೊಸ ಹೀರೋ ಎಕ್ಸ್ ಪಲ್ಸ್ 200 4 ವಿ ಈಗ ಬಿಎಸ್ 6 200 ಸಿಸಿ, 4 ವಾಲ್ವ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 19.1 ಬಿಹೆಚ್ ಪಿ @8500 ಆರ್ ಪಿಎಂ ಮತ್ತು 17.35 ಎನ್ಎಂ @6500 ಆರ್ ಪಿಎಂ ಟಾರ್ಕ್ ಉತ್ಪಾದಿಸುತ್ತದೆ. 4-ವಾಲ್ವ್ ಆಯಿಲ್-ಕೂಲ್ಡ್ ಎಂಜಿನ್ ಮಿಡ್ ಮತ್ತು ಟಾಪ್-ಎಂಡ್ ಸ್ಪೀಡ್ ರೇಂಜ್ ನಲ್ಲಿ ಉನ್ನತ ಶಕ್ತಿಯನ್ನು ಒದಗಿಸುತ್ತದೆ, ಜೊತೆಗೆ ಹೆಚ್ಚಿನ ವೇಗದಲ್ಲಿ ಕಂಪನಗಳನ್ನು ಕಡಿಮೆ ಮಾಡುತ್ತದೆ.
ಭಾರೀ ದಟ್ಟಣೆಯಲ್ಲಿ ಉತ್ತಮ ಶಾಖ ನಿರ್ವಹಣೆಗಾಗಿ, ಕೂಲಿಂಗ್ ವ್ಯವಸ್ಥೆಯನ್ನು ಈಗ 7 ಫಿನ್ ಆಯಿಲ್ ಕೂಲರ್‌ನೊಂದಿಗೆ ನವೀಕರಿಸಲಾಗಿದೆ, ಇದು ಪ್ರಸರಣ ಸೆಟಪ್ ಅನ್ನು ಗಮನಾರ್ಹವಾಗಿ ಸುಧಾರಿಸುತ್ತದೆ, ಉತ್ತಮ ಶಕ್ತಿ ಮತ್ತು ಬಾಳಿಕೆಯನ್ನು ನೀಡುತ್ತದೆ ಆದರೆ ಗೇರ್ ಅನುಪಾತವನ್ನು ಉತ್ತಮ ವೇಗವರ್ಧನೆಗೆ ನವೀಕರಿಸಲಾಗಿದೆ ಎಂದು ಹಿರೋ ಮೊಟೋಕಾರ್ಪ್ ಕಂಪನಿ ಹೇಳಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ವಿಡಿಯೋ ಮಾಡಲು ಹೋದವರನ್ನು ಅಟ್ಟಾಡಿಸಿದ ಕಾಡಾನೆ! ದೃಶ್ಯ ನೋಡಿ