ಹೈಕಮಾಂಡ್​ನಿಂದ ನಂಗೆ ಯಾವುದೇ ನೋಟೀಸ್ ಬಂದಿಲ್ಲ: ಶಾಮನೂರು ಶಿವಶಂಕರಪ್ಪ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Oct 06, 2023 | 6:34 PM

ಲಿಂಗಾಯತ ಮಹಾಸಭಾದ ವೀರಶೈವ ಲಿಂಗಾಯತ ಮಹಾ ಅಧಿವೇಶನ ಡಿಸೆಂಬರ್ 23 ಮತ್ತು 24 ರಂದು ನಡೆಯಲಿದೆ ಮತ್ತು ಸುಮಾರು ಒಂದು ಲಕ್ಷ ಜನ ಸೇರಲಿದ್ದಾರೆ ಶಿವಶಂಕರಪ್ಪ ಹೇಳಿದರು. ಅಧಿವೇಶನ ನಡೆಸುತ್ತಿರುವುದು ಲಿಂಗಾಯತರ ಶಕ್ತಿ ಪ್ರದರ್ಶನಕ್ಕಾ ಅಂತ ಕೇಳಿದಾಗ ಅವರು ಒಂದು ಲಕ್ಷ ಜನ ಸೇರಿದರೆ ಅದು ಶಕ್ತಿ ಪ್ರದರ್ಶನ ಹೇಗಾಗುತ್ತದೆ, ಹತ್ತಿಪ್ಪತ್ತು ಲಕ್ಷ ಸೇರಿದರೆ ಅದು ಶಕ್ತಿ ಪ್ರದರ್ಶನ ಅನಿಸಿಕೊಳ್ಳುತ್ತದೆ ಎಂದರು.

ದಾವಣಗೆರೆ: ಶಾಮನೂರು ಶಿವಶಂಕರಪ್ಪನವರ (Shamanur Shivashankarappa) ಮಾತೇ ಹಾಗೆ, ದಾವಣಗೆರೆಯವರು ಹೇಳುವ ಹಾಗೆ ಖಡಾಮುಡಿ! ಇಂದು ನಗರದಲ್ಲಿ ನಡೆದ ವೀರಶೈವ ಲಿಂಗಾಯತ ಸಮುದಾಯದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಲಿಂಗಾಯತ ಮಹಾಸಭಾದ ವೀರಶೈವ ಲಿಂಗಾಯತ ಮಹಾ ಅಧಿವೇಶನ (Veerashaiva Lingayat Convention) ಡಿಸೆಂಬರ್ 23 ಮತ್ತು 24 ರಂದು ನಡೆಯಲಿದೆ ಮತ್ತು ಸುಮಾರು ಒಂದು ಲಕ್ಷ ಜನ ಸೇರಲಿದ್ದಾರೆ ಎಂದು ಹೇಳಿದರು. ಅಧಿವೇಶನ ನಡೆಸುತ್ತಿರುವುದು ಲಿಂಗಾಯತರ ಶಕ್ತಿ ಪ್ರದರ್ಶನಕ್ಕಾ ಅಂತ ಕೇಳಿದಾಗ ಶಿವಶಂಕರಪ್ಪನವರು ಒಂದು ಲಕ್ಷ ಜನ ಸೇರಿದರೆ ಅದು ಶಕ್ತಿ ಪ್ರದರ್ಶನ ಹೇಗಾಗುತ್ತದೆ, ಹತ್ತಿಪ್ಪತ್ತು ಲಕ್ಷ ಸೇರಿದರೆ ಅದು ಶಕ್ತಿ ಪ್ರದರ್ಶನ ಅನಿಸಿಕೊಳ್ಳುತ್ತದೆ ಎಂದು ಹೇಳಿದರು. ಲಿಂಗಾಯತ ಸಮುದಾಯಕ್ಕೆ ಆನ್ಯಾಯ ಅಂತೆಲ್ಲ ಮಾತಾಡಬಾರದೆಂದು ಹೈ ಕಮಾಂಡ್ ಏನಾದರೂ ಅವರಿಗೆ ಸೂಚನೆ ನೀಡಿದೆಯಾ ಅಂತ ಕೇಳಿದ ಪ್ರಶ್ನೆಗೆ ಅವರು, ಯಾವ ಹೈಕಮಾಂಡ್ ಇಲ್ಲ ಎಂಥದ್ದೂ ಇಲ್ಲ ಎಂದು ಶಿವಶಂಕರಪ್ಪ ಹೇಳಿದರು. ಅವರು ಲಿಂಗಾಯತ ಶಾಸಕರು ಮತ್ತು ಅಧಿಕಾರಿಗಳಿಗೆ ಸಸರ್ಕಾರದಿಂದ ಅನ್ಯಾಯವಾಗುತ್ತಿದೆ ಅಂತ ಹೇಳಿದ್ದು ರಾಜ್ಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.