Who would be CM? ಪಕ್ಷದ ವರಿಷ್ಠರು ಸಿದ್ದರಾಮಯ್ಯ ಮತ್ತು ನನ್ನನ್ನು ದೆಹಲಿಗೆ ಕರೆಸಿದ್ದಾರೆ, ನಾನು ಹೋಗೋದು ಸ್ವಲ್ಪ ತಡವಾಗುತ್ತದೆ: ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ತನ್ನನ್ನು ಆಯ್ಕೆಮಾಡಿ ದೆಹಲಿಗೆ ಕರೆಸಿದೆ. ಸಿದ್ದರಾಮಯ್ಯ ಈಗಾಗಲೇ ದೆಹಲಿ ತಲುಪಿದ್ದಾರೆ, ಸ್ವಲ್ಪ ಸಮಯದ ನಂತರ ತಾನು ಹೋಗುವುದಾಗಿ ಶಿವಕುಮಾರ್ ಹೇಳಿದರು.
ಬೆಂಗಳೂರು: ಬರ್ತ್ ಡೇ ಬಾಯ್ ಡಿಕೆ ಶಿವಕುಮಾರ್ (DK Shivakumar) ಇಂದು ಸಾಯಂಕಾಲ ತಮ್ಮ ಸದಾಶಿವನಗರ ನಿವಾಸದಲ್ಲಿ ಪತ್ರಿಕಾ ಗೋಷ್ಟಿ ಕರೆದು ಮಾತಾಡಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಳವಡಿಸಿದ ರಣನೀತಿ (strategy), ಪ್ರದರ್ಶಿಸಿದ ಐಕ್ಯತೆ ಮತ್ತು ಒಗ್ಗಟ್ಟು (solidarity), ಪ್ರಚಾರ ತಂತ್ರ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದ ಶಿವಕುಮಾರ್ ಸಮಯದ ಅಭಾವದ ಕಾರಣ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಬಳಸುವುದು ಸಾಧ್ಯವಾಗಲಿಲ್ಲ, ಅವುಗಳನ್ನೂ ಪ್ರಯೋಗಿಸಿದ್ದರೆ, ಕಾಂಗ್ರೆಸ್ ಪಕ್ಷದ ಪ್ರದರ್ಶನ ಇನ್ನೂ ಅದ್ಭುತವಾಗಿರುತಿತ್ತು ಎಂದರು. ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ತನ್ನನ್ನು ಆಯ್ಕೆಮಾಡಿ ದೆಹಲಿಗೆ ಕರೆಸಿದೆ. ಸಿದ್ದರಾಮಯ್ಯ ಈಗಾಗಲೇ ದೆಹಲಿ ತಲುಪಿದ್ದಾರೆ, ಸ್ವಲ್ಪ ಸಮಯದ ನಂತರ ತಾನು ಹೋಗುವುದಾಗಿ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos