Video: ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದ ಥಾರ್, ಪ್ರವಾಸಕ್ಕೆ ಹೊರಟಿದ್ದ ಐದು ಮಂದಿ ಸಾವು
ಗುರುಗ್ರಾಮದ ರಾಜೀವ್ ಚೌಕ್ ಬಳಿ ಇರುವ ರಾಷ್ಟ್ರೀಯ ಗೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೀಡಾದ ವಾಹನವು ಮಹೀಂದ್ರಾ ಥಾರ್ ಆಗಿದ್ದು, ಆರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಎಲ್ಲರೂ ಉತ್ತರ ಪ್ರದೇಶದಿಂದ ಗುರುಗ್ರಾಮ್ಗೆ ಕೆಲಸಕ್ಕೆ ಸಂಬಂಧಿಸಿದ ಪ್ರವಾಸಕ್ಕೆಂದು ಹೋಗುತ್ತಿದ್ದರು.
ಗುರುಗ್ರಾಮ, ಸೆಪ್ಟೆಂಬರ್ 27: ಗುರುಗ್ರಾಮದ ರಾಜೀವ್ ಚೌಕ್ ಬಳಿ ಇರುವ ರಾಷ್ಟ್ರೀಯ ಗೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೀಡಾದ ವಾಹನವು ಮಹೀಂದ್ರಾ ಥಾರ್ ಆಗಿದ್ದು, ಆರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಎಲ್ಲರೂ ಉತ್ತರ ಪ್ರದೇಶದಿಂದ ಗುರುಗ್ರಾಮ್ಗೆ ಕೆಲಸಕ್ಕೆ ಸಂಬಂಧಿಸಿದ ಪ್ರವಾಸಕ್ಕೆಂದು ಹೋಗುತ್ತಿದ್ದರು.
ರಾಜೀವ್ ಚೌಕ್ ಕಡೆಗೆ ಹೆದ್ದಾರಿಯಿಂದ ನಿರ್ಗಮಿಸುತ್ತಿದ್ದಾಗ, ವೇಗವಾಗಿ ಬಂದ ಥಾರ್ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಪರಿಣಾಮವಾಗಿ ವಾಹನವು ಹಲವು ಬಾರಿ ಪಲ್ಟಿಯಾಗಿದೆ.ಆರು ಮಂದಿ ಪೈಕಿ ಒಬ್ಬರ ಪ್ರಾಣ ಮಾತ್ರ ಉಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ