AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸುನ್ ಶಾನಕ ಮಾಡಿದ ಸಣ್ಣ ತಪ್ಪಿನಿಂದ ಗೆದ್ದ ಟೀಮ್ ಇಂಡಿಯಾ

ದಸುನ್ ಶಾನಕ ಮಾಡಿದ ಸಣ್ಣ ತಪ್ಪಿನಿಂದ ಗೆದ್ದ ಟೀಮ್ ಇಂಡಿಯಾ

ಝಾಹಿರ್ ಯೂಸುಫ್
|

Updated on: Sep 27, 2025 | 7:33 AM

Share

India vs Sri lanka: ಸಿಕ್ಕ ಅವಕಾಶವನ್ನು ಬಳಸಿಕೊಳದ್ದೇ ಶ್ರೀಲಂಕಾ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಕಲೆಹಾಕಿದ್ದು ಕೇವಲ 2 ರನ್ ಮಾತ್ರ. ಈ ಗುರಿಯನ್ನು ಮೊದಲ ಎಸೆತದಲ್ಲೇ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಜಯ ಸಾಧಿಸಿತು.

ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ನ 18ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ ಬರೋಬ್ಬರಿ 202 ರನ್ ಕಲೆಹಾಕಿದ್ದರು203 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಪರ ಪಾತುಮ್ ನಿಸ್ಸಂಕಾ (107) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಲಂಕಾ ತಂಡವು 19 ಓವರ್‌ಗಳಲ್ಲಿ 191 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್‌ನಲ್ಲಿ ಶ್ರೀಲಂಕಾ ತಂಡಕ್ಕೆ 12 ರನ್ ಗಳ ಅವಶ್ಯಕತೆಯಿತ್ತು.

20ನೇ ಓವರ್ ಎಸೆದ ಹರ್ಷಿತ್ ರಾಣಾ ಮೊದಲ ಎಸೆತದಲ್ಲೇ ನಿಸ್ಸಂಕಾ ವಿಕೆಟ್ ಪಡೆದರು. ಇನ್ನು ದ್ವಿತೀಯ ಎಸೆತದಲ್ಲಿ ನೀಡಿದ್ದು ಕೇವಲ 2 ರನ್ ಮಾತ್ರ. ಮೂರನೇ ಎಸೆತದಲ್ಲಿ 1 ರನ್ ಬಿಟ್ಟು ಕೊಟ್ಟರು. ನಾಲ್ಕನೇ ಎಸೆತದಲ್ಲಿ 2 ರನ್ ನೀಡಿದರು. ಐದನೇ ಎಸೆತದಲ್ಲಿ ದಸುನ್ ಶಾನಕ ಫೋರ್ ಬಾರಿಸಿದರು.

ಅದರಂತೆ ಶ್ರೀಲಂಕಾ ತಂಡಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ 3 ರನ್ ಗಳು ಬೇಕಿತ್ತು. ದಸುನ್ ಶಾನಕ ಲಾಂಗ್ ಆನ್​ನತ್ತ ಬಾರಿಸಿದರು. ಚೆಂಡು ಹಿಡಿಯಲು ಬಂದ ಅಕ್ಷರ್ ಪಟೇಲ್ ಮಿಸ್ ಫೀಲ್ಡ್ ಮಾಡಿದರು.

ಇದರ ನಡುವೆ ದಸುನ್ ಶಾನಕ ಎರಡನೇ ರನ್ ಓಡಿದರು. ಅಲ್ಲದೆ ಎರಡನೇ ರನ್ ಪೂರೈಸಲು ಡೈವ್ ಹೊಡೆದಿದ್ದಾರೆ. ಇತ್ತ ಅಕ್ಷರ್ ಪಟೇಲ್ ಮಿಸ್ ಫೀಲ್ಡ್ ಮಾಡಿರುವುದನ್ನು ಗಮನಿಸಿದ ಜೆನಿತ್ ಲಿಯಾನಘೆ ಮೂರನೇ ರನ್ ಓಡಲು ಮುಂದಾಗಿದ್ದರು.

ಆದರೆ ಅತ್ತ ಶಾನಕ ಡೈವ್ ಹೊಡೆದು ಎರಡನೇ ರನ್ ಪೂರೈಸಿ ಮಲಗಿದ್ದರು. ಚೆಂಡನ್ನು ಗಮನಿಸದೇ ಡೈವ್ ಹೊಡೆದು ಮಲಗಿದ್ದರಿಂದ ಇತ್ತ ಮೂರನೇ ರನ್ ಓಡುವ ಅವಕಾಶವನ್ನು ಕೈತಪ್ಪಿಸಿಕೊಂಡರು.

ಅಂದರೆ ಮೂರು ರನ್ ಓಡುವ ಅವಕಾಶದ ಬಗ್ಗೆ ದಸುನ್ ಶಾನಕ ಚಿಂತಿಸಿಯೇ ಇರಲಿಲ್ಲ. ಬದಲಾಗಿ ಪಂದ್ಯವನ್ನು ಟೈ ಮಾಡಲು ನಿರ್ಧರಿಸಿದ್ದರು. ಇದರಿಂದಾಗಿ ಮೂರನೇ ರನ್ ಓಡಿ ಗೆಲ್ಲುವ ಅವಕಾಶ ಶ್ರೀಲಂಕಾ ತಂಡದ ಕೈ ತಪ್ಪಿತು.

ದಸುನ್ ಶಾನಕ ಮೂರನೇ ರನ್ ಓಡುವ ಅವಕಾಶವನ್ನು ಕೈ ಚೆಲ್ಲುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಶ್ರೀಲಂಕಾ ಆಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಳದ್ದೇ ಶ್ರೀಲಂಕಾ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಕಲೆಹಾಕಿದ್ದು ಕೇವಲ 2 ರನ್ ಮಾತ್ರ. ಈ ಗುರಿಯನ್ನು ಮೊದಲ ಎಸೆತದಲ್ಲೇ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಜಯ ಸಾಧಿಸಿತು.