AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಪೇಟೆ: ಬೆಳ್ಳಂಬೆಳಗ್ಗೆ ಅಡುಗೆ ಸಿಲಿಂಡರ್​ ಸ್ಫೋಟ; 8 ಜನರಿಗೆ ಗಾಯ

ಹೊಸಪೇಟೆ: ಬೆಳ್ಳಂಬೆಳಗ್ಗೆ ಅಡುಗೆ ಸಿಲಿಂಡರ್​ ಸ್ಫೋಟ; 8 ಜನರಿಗೆ ಗಾಯ

ಗಂಗಾಧರ​ ಬ. ಸಾಬೋಜಿ
|

Updated on: Sep 27, 2025 | 9:29 AM

Share

ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಬೆಳಗಿನ ಜಾವ ಅಡುಗೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಮನೆಯಲ್ಲಿದ್ದ 8 ಜನರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಸಂಪೂರ್ಣ ಕುಸಿದಿದೆ. ಗಾಯಾಳುಗಳನ್ನು ತೋರಣಗಲ್ಲು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಡಿಯೋ ನೋಡಿ.

ವಿಜಯನಗರ, ಸೆಪ್ಟೆಂಬರ್​​ 27: ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಅಡುಗೆ ಸಿಲಿಂಡರ್​ ಸ್ಫೋಟಗೊಂಡು (Cylinder explosion) ಮನೆಯಲ್ಲಿದ್ದ 8 ಜನರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಅಡುಗೆ ಸಿಲಿಂಡರ್​ ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದೆ. ಸದ್ಯ ಗಾಯಾಳುಗಳಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.