Video: ಹಿಂದೂ ಮೂಲಭೂತವಾದವು ಜಗತ್ತಿಗೆ ದೊಡ್ಡ ಬೆದರಿಕೆ ಎಂದ ಪಾಕ್ ಪ್ರಧಾನಿ ಷರೀಫ್
ಭಾರತದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲು ಮತ್ತೊಮ್ಮೆ ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಮಾತನಾಡಿ, ಭಾರತದಲ್ಲಿ ಬೆಳೆಯುತ್ತಿರುವ ಹಿಂದೂ ಮೂಲಭೂತವಾದವು ಇಡೀ ಜಗತ್ತಿಗೆ ದೊಡ್ಡ ಬೆದರಿಕೆ ಎಂದು ಹೇಳಿದ್ದಾರೆ. ಮೇ 7-10 ರಿಂದ ನಡೆದ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷವನ್ನು ಉಲ್ಲೇಖಿಸಿ, ಶೆಹಬಾಜ್ ಷರೀಫ್ ತಮ್ಮ ಬೆನ್ನು ತಾವೇ ತಟ್ಟಿಕೊಂಡರು. ಹಾಗೂ ಅಮೆರಿಕ ಪ್ರಧಾನಿ ಟ್ರಂಪ್ಗೆ ಧನ್ಯವಾದ ತಿಳಿಸಿದರು.
ವಾಷಿಂಗ್ಟನ್, ಸೆಪ್ಟೆಂಬರ್ 27: ಭಾರತದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲು ಮತ್ತೊಮ್ಮೆ ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಮಾತನಾಡಿ, ಭಾರತದಲ್ಲಿ ಬೆಳೆಯುತ್ತಿರುವ ಹಿಂದೂ ಮೂಲಭೂತವಾದವು ಇಡೀ ಜಗತ್ತಿಗೆ ದೊಡ್ಡ ಬೆದರಿಕೆ ಎಂದು ಹೇಳಿದ್ದಾರೆ. ಮೇ 7-10 ರಿಂದ ನಡೆದ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷವನ್ನು ಉಲ್ಲೇಖಿಸಿ, ಶೆಹಬಾಜ್ ಷರೀಫ್ ತಮ್ಮ ಬೆನ್ನು ತಾವೇ ತಟ್ಟಿಕೊಂಡರು. ಹಾಗೂ ಅಮೆರಿಕ ಪ್ರಧಾನಿ ಟ್ರಂಪ್ಗೆ ಧನ್ಯವಾದ ತಿಳಿಸಿದರು.
ಜಗತ್ತಿನಲ್ಲಿ ಎಲ್ಲಿಯೂ ದ್ವೇಷಕ್ಕೆ ಸ್ಥಾನವಿರಬಾರದು. ಯಾರ ವಿರುದ್ಧವೂ ತಾರತಮ್ಯ ಮಾಡಬಾರದು, ಆದರೆ ಇದು ಭಾರತದಲ್ಲಿ ನಡೆಯುತ್ತಿದೆ. ಭಾರತದಲ್ಲಿ ಆಮೂಲಾಗ್ರ ಹಿಂದುತ್ವದ ಸಿದ್ಧಾಂತವು ವೇಗವಾಗಿ ಬೆಳೆಯುತ್ತಿದೆ, ಇದು ಜಗತ್ತಿಗೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಷರೀಫ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತ ನಡುವೆ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸದಿದ್ದರೆ, ಯುದ್ಧದ ಪರಿಣಾಮಗಳು ಹಾನಿಕಾರಕವಾಗುತ್ತಿದ್ದವು ಎಂದು ಅವರು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

