Video: ಹಿಮಾಚಲ ಪ್ರವಾಹ, ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು

Updated on: Jul 06, 2025 | 12:10 PM

ಹಿಮಾಚಲ ಪ್ರದೇಶದಲ್ಲಿ ಜೂನ್ 30ರ ರಾತ್ರಿ ಭಾರಿ ಪ್ರವಾಹ ಸಂಭವಿಸಿತ್ತು. ಹಲವು ಮನೆಗಳು ಕೊಚ್ಚಿಕೊಂಡು ಹೋಗಿತ್ತು. ಈ ವಿನಾಶಕಾರಿ ಪ್ರವಾಹದಲ್ಲಿ ಇಡೀ ಕುಟುಂಬದವರನ್ನು ಕಳೆದುಕೊಂಡು 11 ತಿಂಗಳ ಹೆಣ್ಣುಮಗು ಅನಾಥವಾಗಿದೆ. ಪವಾಡ ಸದೃಶವೆಂಬುವಂತೆ ಮಗು ನಿಕಿತಾ ಬದುಕುಳಿದಿದೆ. ಸೆರಾಜ್ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಶಿಶುವಿನ ಪೋಷಕರು ಮತ್ತು ಅಜ್ಜಿ ಕೊಚ್ಚಿ ಹೋಗಿದ್ದಾರೆ.

ಹಿಮಾಚಲಪ್ರದೇಶ, ಜುಲೈ 06: ಹಿಮಾಚಲ ಪ್ರದೇಶದಲ್ಲಿ ಜೂನ್ 30ರ ರಾತ್ರಿ ಭಾರಿ ಪ್ರವಾಹ ಸಂಭವಿಸಿತ್ತು. ಹಲವು ಮನೆಗಳು ಕೊಚ್ಚಿಕೊಂಡು ಹೋಗಿತ್ತು. ಈ ವಿನಾಶಕಾರಿ ಪ್ರವಾಹದಲ್ಲಿ ಇಡೀ ಕುಟುಂಬದವರನ್ನು ಕಳೆದುಕೊಂಡು 11 ತಿಂಗಳ ಹೆಣ್ಣುಮಗು ಅನಾಥವಾಗಿದೆ. ಪವಾಡ ಸದೃಶವೆಂಬುವಂತೆ ಮಗು ನಿಕಿತಾ ಬದುಕುಳಿದಿದೆ. ಸೆರಾಜ್ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಶಿಶುವಿನ ಪೋಷಕರು ಮತ್ತು ಅಜ್ಜಿ ಕೊಚ್ಚಿ ಹೋಗಿದ್ದಾರೆ.

ನೀರಿನ ಮಟ್ಟ ಹಠಾತ್ತನೆ ಏರಿದಾಗ ನಿಕಿತಾಳ ತಂದೆ ರಮೇಶ್, ತಾಯಿ ರಾಧಾ ಮತ್ತು ಅಜ್ಜಿ ಪೂರ್ಣು ದೇವಿ ತಮ್ಮ ಮನೆಯ ಹಿಂದೆ ಉಕ್ಕಿ ಹರಿಯುತ್ತಿದ್ದ ನೀರನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನದಲ್ಲಿದ್ದರು. ಆಗ ಅವರೆಲ್ಲರೂ ಕೊಚ್ಚಿ ಹೋಗಿದ್ದಾರೆ. ಮನೆಯಲ್ಲಿ ಮಲಗಿದ್ದ ಮಗು ಸುರಕ್ಷಿತವಾಗಿತ್ತು. ರಮೇಶ್ ಅವರ ಮೃತದೇಹ ಪತ್ತೆಯಾಗಿದ್ದು, ರಾಧಾ ಮತ್ತು ಪೂರ್ಣು ದೇವಿಗಾಗಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ