Daily Devotional: ವೀಳ್ಯದೆಲೆ ದೀಪದ ಮಹತ್ವ ಮತ್ತು ಹಚ್ಚುವ ವಿಧಾನ ತಿಳಿಯಿರಿ

|

Updated on: Dec 22, 2024 | 7:35 AM

ಹಿಂದೂ ಧರ್ಮದಲ್ಲಿ ದೀಪದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪೂಜೆಯಲ್ಲಿ ದೀಪವಿಲ್ಲದೆ ಪೂಜೆ ಅಪೂರ್ಣ ಎಂದು ನಂಬಲಾಗಿದೆ. ಜ್ಯೋತಿಷಿ ಬಸವರಾಜ ಗುರೂಜಿಯವರು ಮನೆಯಲ್ಲಿನ ಜಗಳಗಳು, ಮನಸ್ತಾಪಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ದೀಪಗಳನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸುತ್ತಾರೆ. ಈ ಲೇಖನವು ದೀಪಗಳ ವಿವಿಧ ರೀತಿಯ ಬಳಕೆ ಮತ್ತು ಅವುಗಳಿಂದ ದೊರೆಯುವ ಪ್ರಯೋಜನಗಳನ್ನು ತಿಳಿಸುತ್ತದೆ. ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಲು ಸಹಾಯಕವಾದ ಮಾರ್ಗಗಳನ್ನು ತಿಳಿದುಕೊಳ್ಳಿ.

ಹಿಂದೂ ಧರ್ಮದಲ್ಲಿ ದೀಪವಿಲ್ಲದೆ ಪೂಜೆ ನಡೆಯುವುದಿಲ್ಲ. ದೀಪ ಇಲ್ಲದ ಪೂಜೆ ಅಪೂರ್ಣ. ಮನುಷ್ಯನ ಆದಿ ಕಾಲ ಮತ್ತು ಅಂತ್ಯ ಕಾಲದಲ್ಲಿಯೂ ಕೂಡ ದೀಪ ಹಚ್ಚುತ್ತೇವೆ. ದೀಪಗಳನ್ನು ವಿಧವಿಧವಾಗಿ ಹಚ್ಚುತ್ತೇವೆ. ಮನೆಯಲ್ಲಿ ಗಲಾಟೆಗಳಾಗುತ್ತಿದ್ದರೇ, ಮನಸ್ತಾಪಗಳಾಗುತ್ತಿದ್ದರೆ, ಆರೋಗ್ಯ ಭಾದೆ ಹೆಚ್ಚಾಗುತ್ತಿದ್ದರೆ ಏನು ಮಾಡಬೇಕು? ಕಷ್ಟ ಕಾರ್ಪಣ್ಯಗಳಿಂದ ಮುಕ್ತವಾಗಲು ಏನು ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.