ಹಿಂದೂತ್ವ ಯಾರೊಬ್ಬರ ಆಸ್ತಿಯಲ್ಲ, ರಾಹುಲ್ ಗಾಂಧಿ ಕೂಡ ಹಿಂದೂ: ಡಿಕೆ ಶಿವಕುಮಾರ
ಸುಮಾರು 25 ವರ್ಷಗಳ ಹಿಂದೆ ಯುಗಾದಿ ಹಬ್ಬದಂದು ಸೋನಿಯಾ ಅವರನ್ನು ಭೇಟಿಯಾಗಲು ದೆಹಲಿಗೆ ತಮ್ಮ ಧರ್ಮಪತ್ನಿಯೊಂದಿಗೆ ಹೋದಾಗ ಅವರ ಮನೆಯಲ್ಲಿ ಹಬ್ಬದೂಟ ಮಾಡಿರುವುದಾಗಿ ಶಿವಕುಮಾರ ಹೇಳಿದರು.
Bengaluru: ಹಿಂದೂತ್ವ ಯಾರೊಬ್ಬರ ಆಸ್ತಿಯಲ್ಲ ಎಂದು ಬೆಂಗಳೂರಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಾಡುವಾಗ ಹೇಳಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ತಾವು, ಸಿದ್ದರಾಮಯ್ಯ, ರಾಹುಲ್ ಗಾಂಧಿ (Rahul Gandhi), ಸೋನಿಯಾ ಗಾಂಧಿ (Sonia Gandhi)-ಎಲ್ಲರೂ ಹಿಂದೂಗಳೇ ಎಂದರು. ಸೋನಿಯಾ ಗಾಂಧಿ ಅವರ ಮನೆಯಲ್ಲೂ ಯುಗಾದಿ ಹಬ್ಬ ಆಚರಿಸಲಾಗುತ್ತದೆ, ಸುಮಾರು 25 ವರ್ಷಗಳ ಹಿಂದೆ ಯುಗಾದಿ ಹಬ್ಬದಂದು ಸೋನಿಯಾ ಅವರನ್ನು ಭೇಟಿಯಾಗಲು ದೆಹಲಿಗೆ ತಮ್ಮ ಧರ್ಮಪತ್ನಿಯೊಂದಿಗೆ ಹೋದಾಗ ಅವರ ಮನೆಯಲ್ಲಿ ಹಬ್ಬದೂಟ ಮಾಡಿರುವುದಾಗಿ ಶಿವಕುಮಾರ ಹೇಳಿದರು.
Published on: Aug 20, 2022 02:53 PM