Video: ಭವ್ಯ ರಾಮಮಂದಿರ ಲೋಕಾರ್ಪಣೆ, ಧರ್ಮ ಧ್ವಜಾರೋಹಣ: ಅಯೋಧ್ಯೆಯಲ್ಲಿ ಭಾರಿ ಭದ್ರತೆ

Updated on: Nov 25, 2025 | 10:34 AM

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ಧ್ವಜಾರೋಹಣ ಮಾಡುವ ಮೂಲಕ 500 ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ. ಸಂಪೂರ್ಣಗೊಂಡ ಭವ್ಯ ದೇವಾಲಯದ ಲೋಕಾರ್ಪಣೆ ಸಮಾರಂಭಕ್ಕೆ 7000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಪ್ತರ್ಷಿ ದೇವಾಲಯಗಳು, ರಾಮ ದರ್ಬಾರ್‌ ಸೇರಿದಂತೆ 60 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಸುಂದರ ಸಂಕೀರ್ಣ ಎಲ್ಲರ ಗಮನ ಸೆಳೆದಿದೆ.

ಅಯೋಧ್ಯೆ, ನವೆಂಬರ್ 25: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ಧ್ವಜಾರೋಹಣ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ದೀರ್ಘಕಾಲದ ರಾಮಮಂದಿರ ಹೋರಾಟಕ್ಕೆ ಇದು ತಾತ್ವಿಕ ಅಂತ್ಯ ದೊರೆತಿದೆ. ಸಂಪೂರ್ಣವಾಗಿ ನಿರ್ಮಾಣಗೊಂಡಿರುವ ರಾಮಮಂದಿರವನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ. ಈ ವಿಶೇಷ ಸಂದರ್ಭಕ್ಕಾಗಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

7000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಧಾನ ದ್ವಾರ ಸೇರಿದಂತೆ ಇಡೀ ಪ್ರದೇಶವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ರಾಮಪಥ, ಭಕ್ತಿಪಥದಂತಹ ರಸ್ತೆಗಳು ಆಧುನಿಕ ಸ್ಪರ್ಶದೊಂದಿಗೆ ಸಿದ್ಧವಾಗಿವೆ. ಈ ಧ್ವಜಾರೋಹಣವು ವಿಜಯದ ಸಂಕೇತವಾಗಿದ್ದು, ರಾಷ್ಟ್ರಕ್ಕೆ ವಿಶೇಷ ಮೈಲಿಗಲ್ಲಾಗಿದೆ ಎಂದು ಬಣ್ಣಿಸಲಾಗಿದೆ. 60 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲಾದ ದೇವಾಲಯದ ಸಂಕೀರ್ಣವು ಆಧುನಿಕ ವೈಶಿಷ್ಟ್ಯಗಳೊಂದಿಗೆ ಭಕ್ತರನ್ನು ಸ್ವಾಗತಿಸಲು ಸಿದ್ಧವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Nov 25, 2025 10:34 AM