ಕಾರು ಗುದ್ದಿ ಪರಾರಿ: ನಟಿ ದಿವ್ಯಾ ಸುರೇಶ್ ವಿರುದ್ಧ ದೂರು ದಾಖಲು
Divya Suresh movies: ಮಾಜಿ ಬಿಗ್ಬಾಸ್ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ವಿರುದ್ಧ ದೂರು ದಾಖಲಾಗಿದೆ. ಅಕ್ಟೋಬರ್ 04 ರಂದು ನಟಿ ದಿವ್ಯಾ ಸುರೇಶ್ ಕಾರಿನಲ್ಲಿ ಅಪಘಾತವೊಂದನ್ನು ಮಾಡಿ ಸ್ಥಳದಿಂದ ಪರಾರಿ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಟಿಯ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಜಿ ಬಿಗ್ಬಾಸ್ (Bigg Boss) ಸ್ಪರ್ಧಿ, ನಟಿ ದಿವ್ಯಾ ಸುರೇಶ್ ವಿರುದ್ಧ ದೂರು ದಾಖಲಾಗಿದೆ. ಅಕ್ಟೋಬರ್ 04 ರಂದು ನಟಿ ದಿವ್ಯಾ ಸುರೇಶ್ ಕಾರಿನಲ್ಲಿ ಅಪಘಾತವೊಂದನ್ನು ಮಾಡಿ ಸ್ಥಳದಿಂದ ಪರಾರಿ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 04 ರಂದು ಬ್ಯಾಟರಾಯನಪುರ ಸಮೀತ ಕಿರಣ್ ಅನಿತಾ ಹಾಗೂ ಇನ್ನೊಬ್ಬರು ಸ್ಪೆಂಡರ್ ಬೈಕ್ನಲ್ಲಿ ಹೋಗುವಾಗ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಬಂದ ದಿವ್ಯಾ ಸುರೇಶ್, ಸ್ಪೆಂಡರ್ ಬೈಕಿಗೆ ಗುದ್ದಿದ್ದಾರೆ. ಘಟನೆಯಲ್ಲಿ ಅನಿತಾ ಅವರ ಕಾಲಿಗೆ ಹಾನಿ ಆಗಿದೆ. ಆದರೆ ದಿವ್ಯಾ ಅವರು ಕಾರು ನಿಲ್ಲಿಸದೆ ಅಲ್ಲಿಂದ ಪರಾರಿ ಆಗಿದ್ದಾರೆ. ಘಟನೆ ಕುರಿತಂತೆ ದಿವ್ಯಾ ಸುರೇಶ್ ವಿರುದ್ಧ ಕಿರಣ್ ಎಂಬುವರು ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ವಿಡಿಯೋನಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 24, 2025 12:55 PM
