AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನಗಾಗಿಯೇ ನಾ ಬಂದಿದ್ದು’: ಬಿಗ್​​ಬಾಸ್ ಮನೆಯಲ್ಲಿ ಅರಳುತ್ತಿದೆ ಹೊಸ ಪ್ರೇಮಕತೆ

Bigg Boss Kannada season 12: ಬಿಗ್​​ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣಗಳು ಸಾಮಾನ್ಯ. ಬಿಗ್​​ಬಾಸ್​​ನಲ್ಲಿ ಜೊತೆಯಾದವರು ಹೊರಗೂ ಒಟ್ಟಿಗೆ ಬಾಳಿದ ಉದಾಹರಣೆಗಳೂ ಸಹ ಇವೆ. ಈ ಸೀಸನ್​​ನಲ್ಲಿ ಗಿಲ್ಲಿ ಆರಂಭದಿಂದಲೂ ಕಾವ್ಯಾ ಹಿಂದೆ ಓಡಾಡುತ್ತಲೇ ಇದ್ದಾರೆ. ಕಾವ್ಯಾ, ಗಿಲ್ಲಿಗೆ ಸರಿಯಾಗಿ ಸೊಪ್ಪು ಹಾಕುತ್ತಿಲ್ಲ. ಇದರ ಮಧ್ಯೆ ಇದೀಗ ಬಿಗ್​​ಬಾಸ್ ಮನೆಯಲ್ಲಿ ಹೊಸ ಪ್ರೇಮಕತೆಯೊಂದು ಶುರುವಾಗುವ ಲಕ್ಷಣ ಕಂಡು ಬಂದಿದೆ.

‘ನಿನಗಾಗಿಯೇ ನಾ ಬಂದಿದ್ದು’: ಬಿಗ್​​ಬಾಸ್ ಮನೆಯಲ್ಲಿ ಅರಳುತ್ತಿದೆ ಹೊಸ ಪ್ರೇಮಕತೆ
Sooraj Rashika
ಮಂಜುನಾಥ ಸಿ.
|

Updated on: Oct 24, 2025 | 11:30 AM

Share

ಬಿಗ್​​ಬಾಸ್ (Bigg Boss) ಮನೆಯಲ್ಲಿ ಪ್ರೇಮ ಪ್ರಕರಣಗಳು ಸಾಮಾನ್ಯ. ಪ್ರತಿ ಸೀಸನ್​​ನಲ್ಲೂ ಒಂದಲ್ಲ ಒಂದು ಜೋಡಿಗಳು ಸಿಕ್ಕೇ ಸಿಗುತ್ತವೆ. ಬಿಗ್​​ಬಾಸ್​​ನಲ್ಲಿ ಜೊತೆಯಾದವರು ಹೊರಗೂ ಒಟ್ಟಿಗೆ ಬಾಳಿದ ಉದಾಹರಣೆಗಳೂ ಸಹ ಇವೆ. ಈ ಸೀಸನ್​​ನಲ್ಲಿ ಗಿಲ್ಲಿ ಆರಂಭದಿಂದಲೂ ಕಾವ್ಯಾ ಹಿಂದೆ ಓಡಾಡುತ್ತಲೇ ಇದ್ದಾರೆ. ಕಾವ್ಯಾ, ಗಿಲ್ಲಿಗೆ ಸರಿಯಾಗಿ ಸೊಪ್ಪು ಹಾಕುತ್ತಿಲ್ಲ. ಇದರ ಮಧ್ಯೆ ಇದೀಗ ಬಿಗ್​​ಬಾಸ್ ಮನೆಯಲ್ಲಿ ಹೊಸ ಪ್ರೇಮಕತೆಯೊಂದು ಶುರುವಾಗುವ ಲಕ್ಷಣ ಕಂಡು ಬಂದಿದೆ.

ವೈಲ್ಡ್ ಕಾರ್ಡ್ ಮೂಲಕ ಮೂವರು ಹೊಸ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಅವರಲ್ಲಿ ಸೂರಜ್ ಸಿಂಗ್ ಸಹ ಒಬ್ಬರು. ಕೆನಡಾನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್, ಇನ್​​ಸ್ಟಾಗ್ರಾಂನಲ್ಲಿ ಫ್ಯಾಷನ್ ಮತ್ತು ಫಿಟ್​​ನೆಸ್ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಶೆಫ್ ಸಹ ಆಗಿದ್ದಾರೆ. ಸಖತ್ ಫಿಟ್ ಆಗಿರುವ ಜೊತೆಗೆ ಅಷ್ಟೇ ಹ್ಯಾಂಡ್ಸಮ್ ಆಗಿಯೂ ಇರುವ ಸೂರಜ್ ಬಿಗ್​​ಬಾಸ್ ಮನೆಗೆ ಬಲು ಹಾಟ್ ಆಗಿಯೇ ಎಂಟ್ರಿ ಕೊಟ್ಟು, ಬಿಗ್​​ಬಾಸ್ ಮನೆಯ ಹೆಂಗೆಳೆಯರ ಮನಸ್ಸು ಕದ್ದಿದ್ದರು.

ಇದೀಗ ನಿನ್ನೆ ನಡೆದ ಟಾಸ್ಕ್​​ನಲ್ಲಿ ಇತರೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಸ್ವಾರ್ಥಿಗಳಾಗದೆ ತಮ್ಮ ತಂಡದ ಪರವಾಗಿ ನಿಂತು ಹೀರೋ ಎನಿಸಿಕೊಂಡಿದ್ದು, ಇದು ಇನ್ನಷ್ಟು ಸ್ಪರ್ಧಿಗಳ ಮನಸ್ಸು ಗೆದ್ದಿದೆ. ಅದರಲ್ಲೂ ರಾಶಿಕಾ ಅಂತೂ ಸೂರಜ್ ಬಗ್ಗೆ ಬಹಳ ಇಂಪ್ರೆಸ್ ಆಗಿದ್ದಾರೆ. ನಿನ್ನೆ ಸೂರಜ್, ತಮ್ಮ ಪರವಾಗಿ ಅಲ್ಲದೆ ತಂಡದ ಪರವಾಗಿ ತೆಗೆದುಕೊಂಡ ನಿರ್ಣಯದ ಬಗ್ಗೆ ರಾಶಿಕಾ, ಸೂರಜ್ ಜೊತೆಗೆ ಮಾತನಾಡುತ್ತಾ, ‘ನೀವು ನಿಮಗಾಗಿ ಆಡಲು ಬಂದಿದ್ದೀರ’ ಎಂದರು ಅದಕ್ಕೆ ಸೂರಜ್ ಫ್ಲರ್ಟ್ ಮಾಡುವ ರೀತಿ, ‘ನಾನು ನಿಮಗಾಗಿ ಬಂದಿದ್ದೀನಿ’ ಎಂದರು. ಸೂರಜ್ ಮಾತಿಗೆ ನಾಚಿ ನೀರಾದರು ರಾಶಿಕಾ.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಸೂರಜ್, ಬಿಗ್​​ಬಾಸ್ ಮನೆಗೆ ಬಂದಾಗಲೇ ರಾಶಿಕಾ, ಸೂರಜ್ ಬಗ್ಗೆ ಆಸಕ್ತಿ ತೋರಿಸಿದ್ದರು. ಸೂರಜ್ ಅವರ ಇನ್​​ಸ್ಟಾಗ್ರಾಂ ವಿಡಿಯೋಗಳನ್ನು ನೋಡಿದ್ದೆ, ಹಾಟ್ ಆಗಿದ್ದಾನೆ ಎಂದುಕೊಂಡಿದ್ದೆ, ನೋಡಿದರೆ ಈಗ ಬಿಗ್​ಬಾಸ್ ಮನೆಗೆ ಬಂದಿದ್ದಾನೆ ಎಂದಿದ್ದರು. ರಾತ್ರಿ ಸಮಯ ಎಲ್ಲರೂ ಮಲಗಿರುವಾಗ ಅಶ್ವಿನಿ, ಜಾನ್ವಿ ಬಳಿ ಮಾತನಾಡುತ್ತಾ, ಸೂರಜ್ ಬಲು ಹಾಟ್ ಆಗಿದ್ದಾನೆ ಎಂದು ಹೇಳಿದ್ದರು.

ಸೂರಜ್ ಜೊತೆಗೆ ರಾಶಿಕಾ ಬಲು ಕ್ಲೋಸ್ ಆಗಿದ್ದಾರೆ. ಸೂರಜ್ ಸಹ ಆಗಾಗ್ಗೆ ರಾಶಿಕಾ ಜೊತೆಗೆ ಫ್ಲರ್ಟ್ ಮಾಡುತ್ತಿದ್ದಾರೆ. ನೋಡಬೇಕು ಇವರಿಬ್ಬರ ಪ್ರೇಮಕತೆ ಎಲ್ಲಿ ಹೋಗಿ ಮುಟ್ಟುತ್ತದೆ ಎಂದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ