ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು
Priya Sudeep and Sudeep: ಸುದೀಪ್ ಹಾಗೂ ಪ್ರಿಯಾ ಸುದೀಪ್ ಅವರ 24ನೇ ವಿವಾಹ ವಾರ್ಷಿಕೋತ್ಸವ ಇಂದು. ಬಿಗ್ಬಾಸ್ ವೇದಿಕೆ ಮೇಲೆ ಇಬ್ಬರ ವಾರ್ಷಿಕೋತ್ಸವ ಆಚರಿಸಲಾಯ್ತು. ಈ ವೇಳೆ ಸುದೀಪ್ ಅವರ ತಂದೆ ಸಂಜೀವ್ ಅವರು ತಮ್ಮ ಸೊಸೆ ಪ್ರಿಯಾ ಅವರ ಬಗ್ಗೆ ಮಾತನಾಡಿದ್ದು ಬಲು ವಿಶೇಷವಾಗಿತ್ತು. ಮಾವನವರು ತಮ್ಮ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಪ್ರಿಯಾ ಅವರು ತುಸು ಭಾವುಕರಾದರು.

ಬಿಗ್ಬಾಸ್ (Bigg Boss) ವೇದಿಕೆ ಮೇಲೆ ಕಿಚ್ಚ ಸುದೀಪ್ಗೆ ಸರ್ಪ್ರೈಸ್ ಒಂದು ನೀಡಲಾಗಿದೆ. ಸುದೀಪ್ ಅವರು ವಾರದ ಪಂಚಾಯಿತಿ ನಡೆಸುವಾಗ ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ಎಂಟ್ರಿ ಕೊಟ್ಟರು. ಪತ್ನಿ ಪ್ರಿಯಾರನ್ನು ವೇದಿಕೆ ಮೇಲೆ ನೋಡಿ ಸ್ವತಃ ಸುದೀಪ್ ಶಾಕ್ ಆದರು. ಪತ್ನಿಯನ್ನು ನೋಡುತ್ತಲೇ ಖುಷಿಯಿಂದ ನಗಲು ಪ್ರಾರಂಭಿಸಿದರು. ಅಸಲಿಗೆ ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವ ಹಾಗಾಗಿ ಸುದೀಪ್ ಅವರಿಗೆ ಈ ಸರ್ಪ್ರೈಸ್ ನೀಡಲಾಯ್ತು.
ಪ್ರಿಯಾ ಸುದೀಪ್ ಹಾಗೂ ಸುದೀಪ್ ಅವರಿಗೆ ನಟ ನಾಗಾರ್ಜುನ, ಡಾಲಿ ಧನಂಜಯ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಟಿ ರಕ್ಷಿತಾ, ರಮೇಶ್ ಅರವಿಂದ್, ಶ್ರೀಮುರಳಿ ಅವರುಗಳು ಶುಭಾಶಯ ಸಂದೇಶ ನೀಡಿದರು. ಆದರೆ ನಿಜವಾಗಿಯೂ ವಿಶೇಷವಾಗಿ ಶುಭ ಹಾರೈಸಿದ್ದು ಸುದೀಪ್ ಅವರ ತಂದೆ ಎಂ ಸಂಜೀವ್ ಅವರು. ತಮ್ಮ ಸೊಸೆ ಪ್ರಿಯಾ ಅವರ ಗುಣಗಾನ ಮಾಡಿದರು ಸಂಜೀವ್.
ಸಂಗೀವ್ ಅವರು ವಿಡಿಯೋ ಮೂಲಕ ಮಗ ಮತ್ತು ಸೊಸೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದರು. ‘ನನ್ನ ಪತ್ನಿ ಹಲವು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದರು. ಅವರು ಇಲ್ಲವಾದ ಬಳಿಕ ಸೊಸೆ ಅದನ್ನೆಲ್ಲ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮದುವೆ ಆಗಿ ಬಂದಾಗ ಹೇಗೋ ಏನೋ ಎಂದುಕೊಂಡೆವು. ಆದರೆ ನನಗೆ ಮೂರನೇ ಮಗಳಾಗಿ ನಮ್ಮ ಮನೆಗೆ ಪ್ರಿಯಾ ಬಂದಳು, ನನ್ನನ್ನು ಅಪ್ಪ ಅಂತಲೇ ಕರೆಯುತ್ತಾಳೆ. ಯಾರೇ ಹೆಚ್ಚು ಕಮ್ಮಿ ಮಾತನ್ನೂ ಸರಿಪಡಿಸಿಕೊಂಡು ಹೋಗುತ್ತಾಳೆ, ಸುದೀಪ್ ಎಲ್ಲೋ ಕೆಲವು ಸಣ್ಣ ಪುಟ್ಟ ತಪ್ಪು ಮಾಡಿದಾಗಲೂ ತಿದ್ದಿ ಸುದೀಪ್ಗೆ ರೂಪ ಕೊಟ್ಟಳು. ನಮ್ಮ ಮನೆಯ ಪಾಲಿಗೆ ಭಾಗ್ಯ ದೇವತೆಯೇ ಆಗಿದ್ದಾಳೆ’ ಎಂದರು ಸಂಗೀವ್.
ಇದನ್ನೂ ಓದಿ:‘ಕ್ಷಮೆ ಇರಲಿ ಕಂದಾ’; ಸುದೀಪ್ ಬುದ್ಧಿವಾದದ ಬಳಿಕ ರಕ್ಷಿತಾ ಬಳಿ ಕ್ಷಮೆ ಕೇಳಿದ ಅಶ್ವಿನಿ
‘ಈಗಲೂ ಸಹ ಯಾವುದಾದರೂ ಸಿನಿಮಾದ ಕತೆ ಕೇಳಬೇಕಾದರೆ, ಸಿನಿಮಾ ತೀರ್ಮಾನ ತೆಗೆದುಕೊಳ್ಳಬೇಕಾದರೂ, ಬಿಗ್ಬಾಸ್ ಬಗ್ಗೆಯೂ ತಮ್ಮ ಅಭಿಪ್ರಾಯ ನೀಡುತ್ತಾಳೆ. ಈ ಬಾರಿ ಬಿಗ್ಬಾಸ್ ನಲ್ಲಿ ಸುದೀಪ್ ಭಾಗಿ ಆಗಲು ಪ್ರಿಯಾ ಕಾರಣ. ಇಬ್ಬರ ಜೋಡಿ ಹೀಗೆಯೇ ಇರಲಿ. ನೂರು ಕಾಲ ಇರಲಿ. ಭಗವಂತ ಕಾಪಾಡಲಿ’ ಎಂದರು.
ಮಾವ ಸಂಜೀವ್ ಅವರ ಮಾತುಗಳನ್ನು ಕೇಳಿ ಪ್ರಿಯಾ ಅವರು ತುಸು ಭಾವುಕರಾದರು. ‘ಇದು ಮರೆಯಲಾಗ ಉಡುಗೊರೆ, ಥ್ಯಾಂಕ್ಸ್ ಅಪ್ಪ. ನನಗೆ ಗೊತ್ತಿರುವಂತೆ ಅವರು ಯಾರನ್ನು ಹೆಚ್ಚು ಹೊಗಳಲ್ಲ. ನಾನು ಮದುವೆ ಆಗುವ ಮುಂಚೆಯೇ ನನ್ನ ಅಪ್ಪ ತೀರಿಕೊಂಡಿದ್ದರು. ಅವರನ್ನೇ ನಾನು ಅಪ್ಪ ಅಂದುಕೊಂಡಿದ್ದೇನೆ. ಅವರೂ ಹಾಗೆಯೇ ನೋಡಿಕೊಂಡಿದ್ದೇನೆ. ಇಂಥಹಾ ಒಂದು ಕ್ಷಣವನ್ನು ನನಗಾಗಿ ಕೊಟ್ಟ ಕಲರ್ಸ್ ಹಾಗೂ ಬಿಗ್ಬಾಸ್ಗೆ ಥ್ಯಾಂಕ್ಸ್ ಎಂದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ




