ವೈಲ್ಡ್ ಕಾರ್ಡ್ ಸ್ಪರ್ಧಿ ‘ಕಾಂತಾರ’ ವಿಲನ್ ರಘುಗೆ ಕಿವಿಮಾತು ಹೇಳಿದ ಸುದೀಪ್
ಇತ್ತೀಚೆಗೆ ಕ್ವಾಟ್ಲೆ ಕಿಚನ್ ಫಿನಾಲೆ ನಡೆಯಿತು. ಈ ಶೋ ಫಿನಾಲೆಯಲ್ಲಿ ರಘು ಅವರು ವಿನ್ ಆಗಿದ್ದಾರೆ. ಸಾಕಷ್ಟು ಕಷ್ಟಪಟ್ಟು ಫಿನಾಲೆ ತಲುಪಿದ್ದೂ ಅಲ್ಲದೆ ಅವರು ಶೋನ ವಿನ್ ಕೂಡ ಆದರು. ಮಾತಿನ ಮೂಲಕ ಗಮನ ಸೆಳೆಯುವ ಅವರು ದೊಡ್ಮನೆಯಲ್ಲಿ ಹೇಗೆ ಯಶಸ್ಸು ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ ಬಾಸ್ (Bigg Boss) ಮೂರನೇ ವಾರವೇ ಫಿನಾಲೆ ನಡೆದಿದೆ. ಇದು ಕನ್ನಡ ಬಿಗ್ ಬಾಸ್ ಪಾಲಿಗೆ ನಿಜಕ್ಕೂ ಹೊಸದು. ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ, ಯಾವೆಲ್ಲ ಸ್ಪರ್ಧಿಗಳು ದೊಡ್ಮನೆಗೆ ಬರುತ್ತಾರೆ ಎನ್ನುವ ಕುತೂಹಲ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಅಶ್ವಿನಿ ಹಾಗೂ ಮಂಜು ಭಾಷಿಣಿ ಹೊರ ಹೋಗಿದ್ದಾರೆ. ಹೀಗಿರುವಾಗಲೇ ಬಿಗ್ ಬಾಸ್ ಮೊದಲ ಫಿನಾಲೆಯಲ್ಲಿ ರಘು ಅವರು ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಒಟ್ಟೂ ಮೂವರು ದೊಡ್ಮನೆಗೆ ಬಂದಿದ್ದಾರೆ.
ಇತ್ತೀಚೆಗೆ ಕ್ವಾಟ್ಲೆ ಕಿಚನ್ ಫಿನಾಲೆ ನಡೆಯಿತು. ಈ ಶೋ ಫಿನಾಲೆಯಲ್ಲಿ ರಘು ಅವರು ವಿನ್ ಆಗಿದ್ದಾರೆ. ಸಾಕಷ್ಟು ಕಷ್ಟಪಟ್ಟು ಫಿನಾಲೆ ತಲುಪಿದ್ದೂ ಅಲ್ಲದೆ ಅವರು ಶೋನ ವಿನ್ ಕೂಡ ಆದರು. ಮಾತಿನ ಮೂಲಕ ಗಮನ ಸೆಳೆಯುವ ಅವರು ದೊಡ್ಮನೆಯಲ್ಲಿ ಹೇಗೆ ಯಶಸ್ಸು ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವೇದಿಕೆ ಮೇಲೆ ರಘು ಮಾತನಾಡಿದರು. ‘ಬಿಗ್ ಬಾಸ್ ಅಂತಾರಾಷ್ಟ್ರೀಯ ಈವೆಂಟ್. ದೊಡ್ಡ ವಿಲನ್ ಆಗಬೇಕು ಎಂಬ ಆಸೆ ಇದೆ. ಕಾಂತಾರ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದೆ. ತುಂಬಾ ಫೇಮ್ ಸಿಕ್ತು. ಬಿಗ್ ಬಾಸ್ 4 ಎಪಿಸೋಡ್ ನೋಡಿದ್ದೇನೆ. ಗಿಲ್ಲಿ-ರಕ್ಷಿತಾ ಇಷ್ಟ. ಇಬ್ಬರೂ ಚೇಂಜ್ ಆಗಿಲ್ಲ. ಉಳಿದವರು ಬದಲಾಗಿದ್ದಾರೆ’ ಎಂದರು ರಘು. ಅವರಿಗೆ ತಾಳ್ಮೆ ಕಡಿಮೆ ಅಂತೆ. ಹೀಗಾಗಿ, ‘ತಾಳ್ಮೆ ಕಳೆದುಕೊಂಡು ಯಾರಿಗೂ ಹೊಡೆದು ಬರಬೇಡಿ’ ಎಂದು ಸುದೀಪ್ ಕಿವಿಮಾತು ಹೇಳಿದರು.
ರಘು ಅವರು ಸೆಲೆಬ್ರಿಟಿಗಳಿಗೆ ಜಿಮ್ ಕೋಚ್. ಅನೇಕ ಸೆಲೆಬ್ರಿಟಿಗಳಿಗೆ ಅವರು ಟ್ರೇನಿಂಗ್ ಮಾಡಿದ್ದಾರೆ. ಅವರು ಕೂಡ ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ‘ಕಾಟೇರ’ ಹಾಗೂ ‘ಕ್ರಾಂತಿ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿಯೂ ಅವರು ವಿಲನ್ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಬರೋ ಕಪ್ಪು ಜನಾಂಗದವರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದರ ಮೇಕಿಂಗ್ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಆ್ಯನಿವರ್ಸರಿಗೆ ಶುಭಾಶಯ ಕೋರಿದ ನಾಗಾರ್ಜುನ
ರಘು ಅವರು ತುಂಬಾನೇ ಗಟ್ಟಿ. ಹೀಗಾಗಿ, ಫಿಸಿಕಲ್ ಟಾಸ್ಕ್ ವಿಚಾರ ಬಂದಾಗ ಅವರು ಗಮನ ಸೆಳೆಯುವ ಸಾಧ್ಯತೆ ಇದೆ. ಈ ಬಗ್ಗೆ ಅಭಿಮಾನಿಗಳಿಗೂ ಸಾಕಷ್ಟು ಕುತೂಹಲ ಇದೆ. ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಗ್ಗೆ ಫ್ಯಾನ್ಸ್ಗೆ ಖುಷಿ ಇದೆ. ಅವರು ದೊಡ್ಮನೆ ವಾತಾವರಣ ಬದಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:15 pm, Sun, 19 October 25



