ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಆ್ಯನಿವರ್ಸರಿಗೆ ಶುಭಾಶಯ ಕೋರಿದ ನಾಗಾರ್ಜುನ
Kichcha Sudeep-Priya: ಅಕ್ಟೋಬರ್ 18ರಂದು ಸುದೀಪ್ ಹಾಗೂ ಪ್ರಿಯಾ ಆ್ಯನಿವರ್ಸರಿ. ಹೀಗಾಗಿ, ವೇದಿಕೆ ಮೇಲೆ ಬಿಗ್ ಬಾಸ್ ಅದ್ದೂರಿಯಾಗಿ ಪ್ರಿಯಾ ಹಾಗೂ ಸುದೀಪ್ ಆ್ಯನಿವರ್ಸರಿ ಆಚರಣೆ ಮಾಡಿದರು. ಈ ವೇಳೆ ನಾಗಾರ್ಜುನ ಅವರು ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿಗೆ ವಿಶ್ ಮಾಡಿದರು.

ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲ, ಪರಭಾಷೆಯಲ್ಲೂ ಫೇಮಸ್ ಆಗಿದ್ದಾರೆ. ಅವರು ತೆಲುಗು ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಅಲ್ಲಿ ಅವರು ನಟಿಸಿದ್ದು ಮಾತ್ರವಲ್ಲ, ಸಾಕಷ್ಟು ಗೆಳೆಯರನ್ನು ಸಂಪಾದಿಸಿದ್ದಾರೆ ಎಂದರೂ ತಪ್ಪಾಗಲಾರದು. ಈಗ ಸುದೀಪ್ ಅವರಿಗೆ ಅಕ್ಕಿನೇನಿ ನಾಗಾರ್ಜುನ ಅವರು ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು, ಸುದೀಪ್ (Sudeep) ಹಾಗೂ ಪ್ರಿಯಾ ವಿವಾಹ ವಾರ್ಷಿಕೋತ್ಸವ.
ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಏರಿದರು. ಸ್ಪರ್ಧಿ ಬರುತ್ತಾರೆ ಎಂದು ಬಿಗ್ ಬಾಸ್ ಹೇಳಿದರು. ಆದರೆ, ಆ ಬಳಿಕ ಬಂದಿದ್ದು ಪ್ರಿಯಾ ಅವರು. ಇದನ್ನು ನೋಡಿ ಸುದೀಪ್ ಶಾಕ್ ಆದರು. ಅಕ್ಟೋಬರ್ 18ರಂದು ಸುದೀಪ್ ಹಾಗೂ ಪ್ರಿಯಾ ಆ್ಯನಿವರ್ಸರಿ. ಹೀಗಾಗಿ, ವೇದಿಕೆ ಮೇಲೆ ಬಿಗ್ ಬಾಸ್ ಅದ್ದೂರಿಯಾಗಿ ಪ್ರಿಯಾ ಹಾಗೂ ಸುದೀಪ್ ಆ್ಯನಿವರ್ಸರಿ ಆಚರಣೆ ಮಾಡಿದರು.
ಇದನ್ನೂ ಓದಿ: ‘ಹಿಂಗಾಯ್ತು ಅಂತ ಬಗ್ಗೋದು ಬೇಡ’- ಜಾನ್ವಿ; ‘ಇವರು ಏನಂದ್ರೂ ಬದಲಾಗಲ್ಲ’ ಎಂದ ಸುದೀಪ್
ಇವರ ಆ್ಯನಿವರ್ಸರಿಗೆ ಹಲವು ಸೆಲೆಬ್ರಿಟಿಗಳು ವಿಶ್ ಮಾಡಿದ ವಿಡಿಯೋನ ಬಿಗ್ ಬಾಸ್ ಹಂಚಿಕೊಂಡರು. ಇದರಲ್ಲಿ ನಾಗಾರ್ಜುನ ಹಂಚಿಕೊಂಡ ವಿಡಿಯೋ ಗಮನ ಸೆಳೆಯಿತು. ‘ನಿಮ್ಮ ಜೊತೆ ಮಾತನಾಡಿದ್ದು ಖುಷಿ ಆಯ್ತು. ನನ್ನ ಪ್ರತಿ ಸಿನಿಮಾ ರಿಲೀಸ್ ಆದಾಗಲೂ ನೀವು ಮೆಸೇಜ್ ಮಾಡ್ತೀರಾ, ಕಂಗ್ರ್ಯಾಜ್ಯುಲೇಷನ್ ಹೇಳ್ತೀರಾ. ಕೂಲಿ ಸಿನಿಮಾ ನೋಡಿ ನನ್ನ ಸೈಮನ್ ಪಾತ್ರಕ್ಕೆ ಶುಭಾಶಯ ಹೇಳಿದ್ರಿ. ಬಿಗ್ ಬಾಸ್ 2.0 ಲಾಂಚ್ ಆಗಿದ್ದಕ್ಕೆ, 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ನಾಗಾರ್ಜುನ ಹೇಳಿದರು. ಇದಕ್ಕೆ ಸುದೀಪ್ ಅವರು ಖುಷಿ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



