ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್, ಹೊರ ಹೋದವರ್ಯಾರು?
Bigg boss Kannada season 12: ಬಿಗ್ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ಮೊದಲ ಫಿನಾಲೆ ಇದೆ. ಶನಿವಾರದ ಎಪಿಸೋಡ್ನಲ್ಲಿ ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗಿದೆ. ಈ ವಾರ ಒಟ್ಟಿಗೆ ಮನೆಯಿಂದ ಹೊರಗೆ ಹೋದ ಸ್ಪರ್ಧಿಗಳು ಯಾರ್ಯಾರು? ಇಲ್ಲಿದೆ ನೋಡಿ ಮಾಹಿತಿ.. ಅಂದಹಾಗೆ ಈ ವಾರ ಇಲ್ಲಿಯವರೆಗೆ ಮೂರು ಮಂದಿ ಮನೆಯಿಂದ ಹೊರಗೆ ಹೋಗಿದ್ದಾರೆ.

ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಶನಿವಾರದ ಎಪಿಸೋಡ್ನಲ್ಲಿ ಒಟ್ಟಿಗೆ ಇಬ್ಬರು ಹೊರಗೆ ಹೋಗಿದ್ದಾರೆ. ಈ ವಾರ ಮೊದಲ ಫಿನಾಲೆ ನಡೆಯುತ್ತಿದ್ದು, ಈ ವಾರವೇ ಬಿಗ್ಬಾಸ್ ಮನೆಯಿಂದ ಸುಮಾರು ಆರು ಮಂದಿ ಹೊರಗೆ ಹೋಗಲಿದ್ದಾರೆ ಎಂಬ ಸುಳಿವನ್ನು ಸುದೀಪ್ ನೀಡಿದ್ದರು. ಅದರಂತೆ ವಾರದ ಪಂಚಾಯಿತಿಯ ಮೊದಲ ದಿನ ಅಂದರೆ ಶನಿವಾರವೇ ಬಿಗ್ಬಾಸ್ ಮನೆಯಿಂದ ಒಟ್ಟಿಗೆ ಇಬ್ಬರನ್ನು ಎಲಿಮಿನೇಟ್ ಮಾಡಲಾಯ್ತು. ಅಲ್ಲಿಗೆ ಡಾಗ್ ಸತೀಶ್ ಸಹ ಸೇರಿದಂತೆ ವಾರದಲ್ಲಿ ಇನ್ನೂ ಒಂದು ದಿನ ಬಾಕಿ ಇರುವಂತೆ ಮೂರು ಮಂದಿಯನ್ನು ಮನೆಯಿಂದ ಹೊರ ಹಾಕಲಾಗಿದೆ.
ಈ ವಾರ ಭರ್ಜರಿ ನಾಮಿನೇಷನ್ಸ್ ಆಗಿತ್ತು. ಈ ವಾರ ಬರೋಬ್ಬರಿ 11 ಮಂದಿ ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯಾ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಶ್, ಚಂದ್ರಪ್ರಭಾ ಅವರುಗಳು ನಾಮಿನೇಟ್ ಆಗಿದ್ದರು. ಮೊದಲಿಗೆ ಎಲ್ಲ ಸ್ಪರ್ಧಿಗಳಿಂದ ಗೇಮ್ ಒಂದನ್ನು ಸುದೀಪ್ ಆಡಿಸಿದರು. ನಾಮಿನೇಟ್ ಆದ ಸ್ಪರ್ಧಿಗಳ ಫೋಟೊ ಇರಿಸಿ ಅದರ ಮೇಲೆ ಇದ್ದ ಗಾಜಿನ ಹೊದಿಕೆಯನ್ನು ಅವರಿಂದಲೇ ಹೊಡೆಸಲಾಯ್ತು. ಯಾರಿಗೆ ಸೇಫ್ ಎಂದು ಬಂದಿದ್ದರೆ ಅವರು ಸೇಫ್, ಯಾರಿಗೆ ಡೇಂಜರ್ ಎಂದು ಬಂದಿದ್ದರೆ ಅವರು ಡೇಂಜರ್ ಜೋನ್.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಸಂಜನಾ ಬರೆದ ಚಿತ್ರ ನೋಡಿ ನಗುವೋ ನಗು
ಈ ಕ್ರಿಯೆಯಲ್ಲಿ ಚಂದ್ರಪ್ರಭಾ, ಗಿಲ್ಲಿ, ಕಾವ್ಯಾ, ರಕ್ಷಿತಾ ಶೆಟ್ಟಿ, ಮಲ್ಲಮ್ಮ ಅವರುಗಳು ಸೇಫ್ ಆಗಿಬಿಟ್ಟರು. ಅಶ್ವಿನಿ, ಸ್ಪಂದನಾ, ಮಂಜು ಭಾಷಿಣಿ, ಅಶ್ವಿನಿ, ಅಭಿಷೇಕ್, ಧ್ರುವಂತ್, ಧನುಶ್ ಅವರುಗಳು ಡೇಂಜರ್ ಜೋನ್ನಲ್ಲಿ ಉಳಿದರು. ಬಳಿಕ ಡೇಂಜರ್ ಜೋನ್ ಅವರನ್ನು ಮಾತ್ರವೇ ಕರೆದು ಮತ್ತೊಂದು ಆಟ ಆಡಿಸಲಾಯ್ತು. ಆ ಆಟದಲ್ಲಿ ಧ್ರುವಂತ್ ಮತ್ತು ಸ್ಪಂದನಾ ಸೇಫ್ ಆದರು.
ಉಳಿದ ಸ್ಪರ್ಧಿಗಳಲ್ಲಿ ಹೊರ ಹೋಗುತ್ತಿರುವವರ ಹೆಸರನ್ನು ಸ್ವತಃ ಸುದೀಪ್ ಘೋಷಿಸಿದರು. ಮಂಜು ಭಾಷಿಣಿ ಮತ್ತು ಅಶ್ವಿನಿ ಅವರು ಈ ವಾರ ಬಿಗ್ಬಾಸ್ ಮನೆಯಿಂದ ಹೊರ ಹೋದರು. ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಡಾಗ್ ಸತೀಶ್ ಹೊರಗೆ ಹೋಗಿದ್ದರು. ಈಗ ಮಂಜು ಭಾಷಿಣಿ ಮತ್ತು ಅಶ್ವಿನಿ ಹೊರ ಹೋಗುವ ಮೂಲಕ ವಾರದಲ್ಲಿ ಇನ್ನೂ ಒಂದು ದಿನ ಉಳಿದಿರುವಾಗಲೇ ಮೂವರು ಹೊರ ಹೋಗಿದ್ದಾರೆ. ಅಂದಹಾಗೆ ನಾಳಿನ ಎಪಿಸೋಡ್ನಲ್ಲಿ ಕೆಲ ಹೊಸ ಸ್ಪರ್ಧಿಗಳು ಬಿಗ್ಬಾಸ್ ಮನೆ ಸೇರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




