ಸುದೀಪ್ ಅವಾಜ್ಗೆ ಅಶ್ವಿನಿ ಗೆಜ್ಜೆ ಸದ್ದು ಸೈಲೆಂಟ್; ಇಷ್ಟೆಲ್ಲ ಆದ್ರೂ ಪಶ್ಚಾತಾಪ ಮಾತ್ರ ಇಲ್ಲ
‘ಬಿಗ್ ಬಾಸ್ ಅಂತ ಮನೆ ನಾಮಕರಣ ಆಗುತ್ತದೆ. ಎಲ್ಲಾ ಸ್ಪರ್ಧಿಗಳನ್ನು ಒಳಗೆ ಕಳಸ್ತೀವಿ. ಮೂರು ವಾರ ಆಗುತ್ತಿದ್ದಂತೆ ಕಂಪ್ಲೇಂಟ್ ಬರುತ್ತದೆ. ಗೆಜ್ಜೆ ಸದ್ದು ಇಡೀ ಮನೆ ಅಷ್ಟೇ ಅಲ್ಲ, ಇಡೀ ಕರ್ನಾಟಕ ಕೇಳಿದೆ’ ಎಂದು ಸುದೀಪ್ ಹೇಳಿದರು. ಸುದೀಪ್ ಹೇಳಿದಂತೆ ಇಡೀ ಕರ್ನಾಟದಾದ್ಯಂತ ಈ ವಿಚಾರ ಚರ್ಚೆ ಆಗಿದ್ದು ನಿಜ. ಆಗ ಜಾನ್ವಿ ಅವರು ತಮಾಷೆಗೆ ಎಂದರು.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಂದು ದೊಡ್ಡ ವಿಚಾರ ಚರ್ಚೆ ಆಗಿದೆ. ಅದುವೇ ಗೆಜ್ಜೆ ಶಬ್ದದ ವಿಚಾರ. ಅಶ್ವಿನಿ ಹಾಗೂ ಜಾನ್ವಿ ಗೆಜ್ಜೆ ಶಬ್ದ ಮಾಡಿದ್ದರು. ಇದನ್ನು ಅವರು ನೇರವಾಗಿ ರಕ್ಷಿತಾ ಶೆಟ್ಟಿ ಮೇಲೆ ಎತ್ತಿ ಹಾಕಿದ್ದರು. ಈ ವಿಚಾರ ರಕ್ಷಿತಾ ಅವರಿಗೆ ಬೇಸರ ಮೂಡಿಸಿತ್ತು. ಅವರು ಕಣ್ಣೀರು ಕೂಡ ಹಾಕಿದರು. ಸುದೀಪ್ ಅವರು ವೀಕೆಂಡ್ನಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. ಅಶ್ವಿನಿ ಹಾಗೂ ಜಾನ್ವಿ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ಬಿಗ್ ಬಾಸ್ ಅಂತ ಮನೆ ನಾಮಕರಣ ಆಗುತ್ತದೆ. ಎಲ್ಲಾ ಸ್ಪರ್ಧಿಗಳನ್ನು ಒಳಗೆ ಕಳಸ್ತೀವಿ. ಮೂರು ವಾರ ಆಗುತ್ತಿದ್ದಂತೆ ಕಂಪ್ಲೇಂಟ್ ಬರುತ್ತದೆ. ಗೆಜ್ಜೆ ಸದ್ದು ಇಡೀ ಮನೆ ಅಷ್ಟೇ ಅಲ್ಲ, ಇಡೀ ಕರ್ನಾಟಕ ಕೇಳಿದೆ’ ಎಂದು ಸುದೀಪ್ ಹೇಳಿದರು. ಸುದೀಪ್ ಹೇಳಿದಂತೆ ಇಡೀ ಕರ್ನಾಟದಾದ್ಯಂತ ಈ ವಿಚಾರ ಚರ್ಚೆ ಆಗಿದ್ದು ನಿಜ. ಆಗ ಜಾನ್ವಿ ಅವರು ತಮಾಷೆಗೆ ಎಂದರು.
‘ಒಬ್ಬರ ವ್ಯಕ್ತಿಯ ವ್ಯಕ್ತಿತ್ವ ಕುಲಗೆಟ್ಟು ಹೋಗುತ್ತಿದೆ ಎಂದಾಗ ತಮಾಷೆ ಹೇಗಾಗುತ್ತದೆ?’ ಎಂದು ಸುದೀಪ್ ಕೇಳಿದರು. ‘ಇದಕ್ಕೆ ಜಾನ್ವಿ ಅವರು ಸ್ಪಷ್ಟನೆ ಕೊಡಲು ಹೋಗಿದ್ದಲ್ಲದೆ, ಹರ್ಟ್ ಮಾಡುವ ಉದ್ದೇಶ ಇರಲಿಲ್ಲ ಎಂದರು. ‘ಹರ್ಟ್ ಮಾಡಿಲ್ವ? ಯಾರಿಗೂ ಹರ್ಟ್ ಆಗಿಲ್ವ?’ ಎಂದು ಸುದೀಪ್ ಕೌಂಟರ್ ಕೊಟ್ಟರು. ‘ನಾವು ಏನಾದರೂ ಹೇಳಿದಾಗ ಅದು ನಗು ಬಂದರೆ ಮಾತ್ರ ಜೋಕ್. ಇಲ್ಲ ಎಂದರೆ ಅದು ಕ್ಯಾರೆಕ್ಟರ್ ಹತ್ಯೆ’ ಎಂದರು ಸುದೀಪ್.
‘ರಕ್ಷಿತಾ ಅವರು ತಮ್ಮ ವ್ಯಕ್ತಿಕ್ತ ಹಾಳಾಗುತ್ತಿದೆ ಎಂದಾಗ ಅವರನ್ನು ಅವರು ಕಾಪಾಡಿಕೊಳ್ಳಲೇಬೇಕಿತ್ತು. ಅದನ್ನು ಅವರು ಮಾಡಿದ್ದಾರೆ. ಜಾನ್ವಿ ಹಾಗೂ ಅಶ್ವಿನಿ ನಿಮ್ಮದು ತುಂಬಾ ಪರ್ಸನಲ್ ಆಯ್ತು. ನೀವು ಬಳಕೆ ಮಾಡಿದ ಶಬ್ದಗಳು ತುಂಬಾನೇ ಕೆಟ್ಟದಾಗಿತ್ತು. ಇದರಿಂದ ರಕ್ಷಿತಾ ಅವರು ಹರ್ಟ್ ಆಗಿದ್ದಾರೆ’ ಎಂದು ಸುದೀಪ್ ಜಾನ್ವಿ ಹಾಗೂ ಅಶ್ವಿನಿಗೆ ಹೇಳಿದರು.
‘ಒಂದು ಸುಧಿ, ಯಮ್ಮಾ ಎಂದು ಕರೆದಾಗ ನಿಮಗೆ ಹರ್ಟ್ ಆಗುತ್ತದೆ ಎಂದಾಗ, ನೀವು ಬೇರೆಯವರನ್ನು ಈಡಿಯಟ್ ಎಂದು ಕರೆಯೋದು ಎಷ್ಟು ಸರಿ ಆಗುತ್ತದೆ ನೀವೆ ಹೇಳಿ’ ಎಂದು ಸುದೀಪ್ ಹೇಳಿದರು. ಇದನ್ನು ಅಶ್ವಿನಿ ಅವರು ಒಪ್ಪಿಕೊಂಡರು. ಭಾಷೆಯ ವಿಚಾರಕ್ಕೆ ಜಾನ್ವಿ ಟೀಕೆ ಮಾಡಿದ್ದರು. ಇದಕ್ಕೂ ಸುದೀಪ್ ಅವರು ಜಾನ್ವಿಗೆ ಬುದ್ಧಿವಾದ ಹೇಳಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯ ಡ್ರಾಮಾಗಳನ್ನು ಬಿಚ್ಚಿಟ್ಟ ಸತೀಶ್
‘ಎಷ್ಟ್ ಸಲ ಬೇಕಾದ್ರೂ ಬಾತ್ರೂಂ ಹೋಗಬಹುದು. ಹೇಗೆ ಬೇಕೋ ಹಾಗೆ ಬಳಸಿಕೊಳ್ಳಿ. ಈ ಮನೆ ನಿಮ್ಮದು’ ಎಂದರು. ಆದರೆ, ಅಶ್ವಿನಿ ಹಾಗೂ ಜಾನ್ವಿಗೆ ಮಾತ್ರ ಸ್ವಲ್ಪವೂ ಪಶ್ಚಾತಾಪ ಕಾಣಿಸಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



