ಅಶ್ವಿನಿಗೆ ಬಕೆಟ್ ಹಿಡಿದು ಓಡಾಡುತ್ತಿರುವ ಜಾನ್ವಿಗೆ ಸುದೀಪ್ ಸಖತ್ ಕ್ಲಾಸ್
‘ಬಿಗ್ ಬಾಸ್’ ಮನೆಯಲ್ಲಿ ಜಂಟಿ ಹಾಗೂ ಒಂಟಿ ಎಂದು ಎರಡು ಕೆಟಗರಿ ಮಾಡಲಾಗಿತ್ತು ಎಂಬುದು ಗೊತ್ತೇ ಇದೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಒಂಟಿ ವರ್ಗದಲ್ಲಿ ಇದ್ದರು. ಆದರೆ, ಅವರು ನಡೆದುಕೊಂಡಿದ್ದು ಮಾತ್ರ ಜಂಟಿ ರೀತಿ ಆಗಿತ್ತು. ಇಬ್ಬರೂ ಈಗಲೂ ಜಂಟಿ ಆಗಿ ಮುಂದುವರಿಯುತ್ತಿದ್ದಾರೆ. ಅಲ್ಲದೆ, ಅಶ್ವಿನಿಗೆ ಅವರು ಬಕೆಟ್ ಹಿಡಿಯುತ್ತಾ ಬಂದಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಜಾನ್ವಿ ಅವರ ಅಶ್ವಿನಿ ಗೌಡ ಅವರ ಚಮಚಾಗಿರಿ ಮಾಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅವರು ಮಾಡ್ತಿರೋದು ಸರಿ ಇಲ್ಲ ಎಂದು ಅನೇಕರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಈಗ ಸುದೀಪ್ ಅವರು ಈ ವಿಚಾರದಲ್ಲಿ ಜಾನ್ವಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಅಶ್ವಿನಿನ ಪುಷ್ ಮಾಡ್ತಾ ಇರಿ, ಒಂದಿನ ಪುಷ್ ಆಗಿ ಇಲ್ಲಿಗೆ ಬರ್ತೀರಾ’ ಎಂದು ಎಚ್ಚರಿಸಿದರು. ಆದರೆ ಜಾನ್ವಿ ನಗುತ್ತಲೇ ಇದ್ದರು. ಅವರಿಗೆ ಈ ಪ್ರಕರಣ ಎಷ್ಟು ಗಂಭೀರವಾಗಿದೆ ಎಂಬುದು ಇನ್ನೂ ಅರ್ಥವಾಗಿಲ್ಲ.
‘ಬಿಗ್ ಬಾಸ್’ ಮನೆಯಲ್ಲಿ ಜಂಟಿ ಹಾಗೂ ಒಂಟಿ ಎಂದು ಎರಡು ಕೆಟಗರಿ ಮಾಡಲಾಗಿತ್ತು ಎಂಬುದು ಗೊತ್ತೇ ಇದೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಒಂಟಿ ವರ್ಗದಲ್ಲಿ ಇದ್ದರು. ಆದರೆ, ಅವರು ನಡೆದುಕೊಂಡಿದ್ದು ಮಾತ್ರ ಜಂಟಿ ರೀತಿ ಆಗಿತ್ತು. ಇಬ್ಬರೂ ಈಗಲೂ ಜಂಟಿ ಆಗಿ ಮುಂದುವರಿಯುತ್ತಿದ್ದಾರೆ. ಅಲ್ಲದೆ, ಅಶ್ವಿನಿಗೆ ಅವರು ಬಕೆಟ್ ಹಿಡಿಯುತ್ತಾ ಬಂದಿದ್ದಾರೆ.
ಅಶ್ವಿನಿ ಹಾಗೂ ಜಾನ್ವಿ ಒಟ್ಟಿಗೆ ಮಲಗುತ್ತಿದ್ದಾರೆ. ಅವರು ಗಳಸ್ಯ ಗಂಟಸ್ಯ ರೀತಿ ಆಗಿಬಿಟ್ಟಿದ್ದಾರೆ ಎಂದರೂ ತಪ್ಪಾಗಲಾರದು. ಈಗ ಜಾನ್ವಿ ಅವರಿಗೆ ನೇರ ಮಾತುಗಳಲ್ಲಿ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಮತ್ತೊಬ್ಬರನ್ನು ಪುಶ್ ಮಾಡುವವರು ಬೇಗ ಔಟ್ ಆಗಿ ಬಿಡುತ್ತಾರೆ.
‘ಜಾನ್ವಿ ಅವರೇ ಅಶ್ವಿನಿ ಅವರನ್ನು ಚೆನ್ನಾಗಿ ಪುಷ್ ಮಾಡ್ತಾ ಇದೀರಾ. ಹೀಗೆ ಪುಷ್ ಮಾಡ್ತಾ ಇರಿ. ಶೀಘ್ರವೇ ಇಲ್ಲಿ ಬರ್ತೀರಾ’ ಎಂದು ಜಾನ್ವಿಗೆ ಸುದೀಪ್ ಅವರು ಎಚ್ಚರಿಕೆ ನೀಡಿದರು. ಈ ಎಚ್ಚರಿಕೆಯಿಂದ ಅವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡಿಲ್ಲ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ಜಾನ್ವಿ-ಅಶ್ವಿನಿ ವಿರುದ್ಧ ಸುದೀಪ್ ರೌದ್ರಾವತಾರ? ಮರುಕಳಿಸುತ್ತಾ ಸೀಸನ್ 10ರ ಘಟನೆ?
ಜಾನ್ವಿ ಅವರು ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ತುಂಬಾನೇ ಅಹಂ ಹೊಂದಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಅವರ ವಿರೋಧಿ ಬಳಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಅವರು ಫಿನಾಲೆವರೆಗೆ ಇರಬಾರದು ಎಂಬುದು ಅನೇಕರ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.