ಹಿಟ್ & ರನ್ ಅಪಘಾತ: ಗಾಯಾಳುವಿಗೆ ನೆರವಾದ ಶಾಸಕ ಜನಾರ್ದನ ರೆಡ್ಡಿ

ಹಿಟ್ & ರನ್ ಅಪಘಾತ: ಗಾಯಾಳುವಿಗೆ ನೆರವಾದ ಶಾಸಕ ಜನಾರ್ದನ ರೆಡ್ಡಿ

ಗಂಗಾಧರ​ ಬ. ಸಾಬೋಜಿ
|

Updated on: Jun 01, 2023 | 3:42 PM

ಹಿಟ್ & ರನ್​ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್​ ಸವಾರ ನನ್ನು ಶಾಸಕ ಜನಾರ್ದನ ರೆಡ್ಡಿ ತಮ್ಮ ವಾಹನದಲ್ಲಿ ಗಾಯಾಳುವನ್ನ ಗಂಗಾವತಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಕೊಪ್ಪಳ: ಹಿಟ್ & ರನ್​ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್​ ಸವಾರ ನನ್ನು ಶಾಸಕ ಜನಾರ್ದನ ರೆಡ್ಡಿ ( Janardhana Reddy) ರಕ್ಷಣೆ ಮಾಡಿದ್ದಾರೆ. ಬೈಕ್ ಮೇಲೆ ತೆರಳುತಿದ್ದ ಸವಾರನಿಗೆ ಅಪರಚಿತ ಕಾರೊಂದು ಡಿಕ್ಕಿ ಹೊಡೆದಿರುವಂತಹ ಘಟನೆ ಗಂಗಾವತಿ ನಗರದಿಂದ ಕಾರಟಗಿಗೆ ಹೋಗುವ ರಸ್ತೆ ಮಾರ್ಗದಲ್ಲಿ ನಡೆದಿತ್ತು. ಅಪಘಾತಕ್ಕೆ ಒಳಗಾಗಿ ರಸ್ತೆ ಮೇಲೆ ಬಿದ್ದು ಗಾಯಾಳು ನರಳುತ್ತಿದ್ದ. ಈ ವೇಳೆ ಶಾಸಕ ಜನಾರ್ದನ ರೆಡ್ಡಿ ತಕ್ಷಣ ತಮ್ಮ ವಾಹನದಲ್ಲಿ ಗಾಯಾಳುವನ್ನ ಗಂಗಾವತಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.