ವಿದ್ಯಾರ್ಥಿನಿ ಪಾಲಿಗೆ ದೇವರಾಗಿ ಬಂದ ಹೋಮ್ ಗಾರ್ಡ್, ಜೀವದ ಹಂಗು ತೊರೆದು ಹೋರಾಡಿದ ವಿಡಿಯೋ

| Updated By: ರಮೇಶ್ ಬಿ. ಜವಳಗೇರಾ

Updated on: Dec 08, 2024 | 12:08 PM

ಸೇತುವೆಯಿಂದ ಕಾಲು ಜಾರಿ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಗೃಹರಕ್ಷಕ ರಕ್ಷಿಸಿದ್ದಾನೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಚಿಕ್ಕರಂಗನಾಥಕೆರೆಯಲ್ಲಿ ಬಿದ್ದ ಕಾಲೇಜು ವಿದ್ಯಾರ್ಥಿನಿಗೆ ಪಾಲಿಗೆ ಹೋಮ್ ಗಾರ್ಡ್ ದೇವರಾಗಿದ್ದಾರೆ.

ಚಾಮರಾಜನಗರ, (ಡಿಸೆಂಬರ್ 08): ಸೇತುವೆಯಿಂದ ಕಾಲು ಜಾರಿ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಗೃಹರಕ್ಷಕ ರಕ್ಷಿಸಿದ್ದಾನೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಚಿಕ್ಕರಂಗನಾಥಕೆರೆಯಲ್ಲಿ ಕಾಲು ಜಾರಿ ಹನೂರು ತಾಲೂಕು ಕಣ್ಣೂರಿನ ರಾಜಮ್ಮ ಬಿದ್ದಿದ್ದಳು, ಅಲ್ಲೇ ಹತ್ತಿರದಲ್ಲಿದ್ದ ಮಧುವಿನಹಳ್ಳಿಯ ಹೋಮ್ ಗಾರ್ಡ್ ಕೃಷ್ಣಮೂರ್ತಿ ಅವರು ಕೆರೆಗೆ ಹಾರಿ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ತಮ್ಮ ಜೀವ ಜೀವದ ಹಂಗು ತೊರೆದು ವಿದ್ಯಾರ್ಥಿನಿಯ ಜೀವ ಉಳಿಸಿದ ಹೋಮ್ ಗಾರ್ಡ್ ಕೃಷ್ಣಮೂರ್ತಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.