ಗೆದ್ದ 15 ದಿನಗಳಲ್ಲೇ ಸಂಡೂರಿಗೆ 2,000 ಮನೆ ತಂದ ಶಾಸಕಿ ಅನ್ನಪೂರ್ಣ..!

ಗೆದ್ದ 15 ದಿನಗಳಲ್ಲೇ ಸಂಡೂರಿಗೆ 2,000 ಮನೆ ತಂದ ಶಾಸಕಿ ಅನ್ನಪೂರ್ಣ..!

ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ರಮೇಶ್ ಬಿ. ಜವಳಗೇರಾ

Updated on:Dec 08, 2024 | 4:23 PM

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕಿ ಅನ್ನಪೂರ್ಣ ಅವರು ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ.

ಬಳ್ಳಾರಿ, (ಡಿಸೆಂಬರ್ 08): ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕಿ ಅನ್ನಪೂರ್ಣ ಅವರು ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ಹೌದು..ಗೆಲುವು ಸಾಧಿಸಿದ ಕೇವಲ 15 ದಿನಗಳಲ್ಲೇ ಸಂಡೂರು ಕ್ಷೇತ್ರಕ್ಕೆ ಬರೋಬ್ಬರಿ 2000 ಮನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು.. ಶಾಸಕಿ ಅನ್ನಪೂರ್ಣ ಮನವಿ ಮೇರೆಗೆ 2,000 ಮನೆಗಳ ಮಂಜೂರು ಆದೇಶವನ್ನು ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಇಂದು(ಡಿಸೆಂಬರ್ 08) ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲೇ ನೀಡಿದರು.

ಅಷ್ಟರಲ್ಲೇ ಅನ್ನಪೂರ್ಣ ತುಕಾರಾಂ ಪೋನ್ ಮಾಡಿ ನನ್ನ ಕ್ಷೇತ್ರಕ್ಕೆ ಮನೆಗಳು ಬೇಕು ಎಂದು ಕೇಳಿದ್ರು. ಈ ಮೂಲಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅನ್ನಪೂರ್ಣ ತುಕಾರಾಂ‌ಗೆ ಸಾಕಷ್ಟು ಕಾಳಜಿ ಇದೆ ಎಂದು ಹೇಳುವ ಮೂಲಕ ಮನೆಗಳ ಮಂಜೂರು ಪತ್ರವನ್ನು ಹಸ್ತಾಂತರಿಸಿದರು.

Published on: Dec 08, 2024 04:21 PM