ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಗೃಹಿಣಿಗೆ ಶೇಕಡ 75ರಷ್ಟು ಸುಟ್ಟಗಾಯ, ಇದು ಕೊಲೆಯತ್ನ ಎಂದ ಸಹೋದರಿ

ಅರುಣ್​ ಕುಮಾರ್​ ಬೆಳ್ಳಿ

Updated on: Jul 24, 2025 | 3:51 PM

ಅಕ್ಕನ ಗಂಡನಿಗೆ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ, ಅವರ ಮೂಲಕ ಪೊಲೀಸರ ಮೇಲೆ ಒತ್ತಡ ಹೇರಿದ ಕಾರಣ ದೂರು ತೆಗೆದುಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದರು, ಕಮೀಷನರ್ ಇಲ್ಲಿಗೆ ಬಂದ ನಂತರವೇ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳುವ ಸಹೋದರಿ, ತಮ್ಮ ತಂದೆತಾಯಿಗಳಿಗೆ ಗಂಡು ಸಂತಾನವಿಲ್ಲ, ಆಸ್ತಿಗಾಗಿ ಅಕ್ಕನ ಗಂಡನ ಮನೆಯವರು ಪೀಡಿಸುತ್ತಿದ್ದಾರೆ ಎನ್ನುತ್ತಾರೆ.

ಹುಬ್ಬಳ್ಳಿ, ಜುಲೈ 24: ಹುಬ್ಬಳ್ಳಿಯಲ್ಲಿ ಗೃಹಿಣಿಯೊಬ್ಬರು ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ದೇಹದಲ್ಲಿ ಶೇಕಡ 75 ರಷ್ಟು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಗೃಹಿಣಿಯ ಸಹೋದರಿ ಮತ್ತು ತಾಯಿ ಹೇಳೋದು ಬೇರೆ. ಅವರ ಪ್ರಕಾರ ಸಿಲಿಂಡರ್ ಲೀಕ್ ಆಗಿಲ್ಲ, ಆಕೆಯ ಗಂಡನೇ ಸಿಲಿಂಡರ್​​ನಿಂದ ಅನಿಲ ಲೀಕ್ ಮಾಡಿ ಕೊಲ್ಲುವ ಪ್ರಯತ್ನ ಮಾಡಿದ್ದಾನೆ ಎಂದು ಅವರು ಹೇಳುತ್ತಾರೆ. ಮಾಧ್ಯಮಗಳೊಂದಿಗೆ ಮಾತಾಡಿರುವ ಸಹೋದರಿ, ವರದಕ್ಷಿಣಿಗಾಗಿ (dowry) ತನ್ನಕ್ಕನನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಗುರಿಪಡಿಸಲಾಗುತಿತ್ತು, ಪ್ರತಿಯೊಂದು ವಿಷಯಕ್ಕೆ ಅಕ್ಕನನ್ನು ಆಕೆಯ ಗಂಡ ಹೊಡೆಯುವುದನ್ನು ಮಾಡುತ್ತಿದ್ದ, ಪೊಲೀಸರಿಗೆ ದೂರು ಕೊಡೋಣ ಅಂತ ತಾನು ಹೇಳಿದರೆ ಅಕ್ಕ, ಬೇಡ ಮನೆತನ ಮಾನ ಹರಾಜಾಗುತ್ತದೆ, ಸರಿ ಹೋಗಬಹುದು, ಸ್ವಲ್ಪ ದಿನ ಕಾಯೋಣ ಎನ್ನುತ್ತಿದ್ದಳು ಎಂದು ಹೇಳುತ್ತಾರೆ.

ಇದನ್ನೂ ಓದಿ:  ನೆಲಮಂಗಲ: ಗ್ಯಾಸ್ ಲಿಕೇಜ್​ನಿಂದ ಹೊತ್ತಿ ಉರಿದ ಮನೆ, ಇಬ್ಬರು ಸಜೀವದಹನ, ನಾಲ್ವರ ಸ್ಥಿತಿ ಚಿಂತಾಜನಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.