ನೆಲಮಂಗಲ: ಗ್ಯಾಸ್ ಲಿಕೇಜ್ನಿಂದ ಹೊತ್ತಿ ಉರಿದ ಮನೆ, ಇಬ್ಬರು ಸಜೀವದಹನ, ನಾಲ್ವರ ಸ್ಥಿತಿ ಚಿಂತಾಜನಕ
ಅಡಕಮಾರನಹಳ್ಳಿಯಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಮನೆ ಹೊತ್ತಿ ಉರಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರ ಮುಂದೆ ದೀಪ ಹಚ್ಚಿಟ್ಟು, ಈ ವೇಳೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ, ಮೇ 01: ಗ್ಯಾಸ್ ಲಿಕೇಜ್ನಿಂದ (Gas leakage) ಮನೆ ಹೊತ್ತಿ ಉರಿದಿದ್ದು, ಇಬ್ಬರು ಸಜೀವದಹನವಾಗಿರುವಂತಹ (death) ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ನಡೆದಿದೆ. ನಾಗರಾಜ್(50) ಮತ್ತು ಶ್ರೀನಿವಾಸ್(50) ಮೃತ ದುರ್ದೈವಿಗಳು. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಮತ್ತು ಬಸವ ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಗಂಗಯ್ಯ ಎಂಬುವವರಿಗೆ ಎರಡು ಬಾಡಿಗೆ ಮನೆಗಳು ಸೇರಿದ್ದು, ಬಳ್ಳಾರಿಯ ನಾಗರಾಜ್ ಕುಟುಂಬ ಒಂದು ಮನೆಯಲ್ಲಿ ಬಾಡಿಗೆಗೆ ಇತ್ತು. ಬೆಳಗ್ಗೆ ಕೆಲಸಕ್ಕೆ ತೆರಳುವಾಗ ನಾಗರಾಜ್ ದೇವರ ಮುಂದೆ ದೀಪ ಹಚ್ಚಿದ್ದರು. ಈ ವೇಳೆ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮಗ ಅಭಿಷೇಕ್ ಮುಂದಾಗಿದ್ದ. ಅಜಾಗರೂಕತೆಯಿಂದ ಸಿಲಿಂಡರ್ ಫಿಟ್ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ತಗುಲಿದೆ. ಬೆಂಕಿಯ ತೀವ್ರತೆಗೆ ನಾಗರಾಜ್ ಹಾಗೂ ಶ್ರೀನಿವಾಸ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿಯ ಕನ್ನಮಂಗಲಪಾಳ್ಯ ಗೇಟ್ ಬಳಿ ಮಿನಿಬಸ್-ಲಾರಿ ನಡುವೆ ಅಪಘಾತ, 7-8 ಜನರಿಗೆ ಗಾಯ
ಮೂಲತಃ ಬಳ್ಳಾರಿಯವರಾಗಿರುವ ನಾಗರಾಜ್ ಕುಟುಂಬ ಎರಡು ವರ್ಷದ ಹಿಂದೆ ಬಾಡಿಗೆಗೆ ಬಂದಿದ್ದರು. ನಾಗರಾಜ್ ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19) ಅಭಿಷೇಕ್ ಗೌಡ (18) ವಾಸವಿದ್ದರು. ಮನೆ ಹೊತ್ತಿ ಉರಿದಾಗ ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್ ಕೂಡ ಬೆಂಕಿಯಲ್ಲಿ ಸಿಲುಕಿದ್ದರು. ಈ ವೇಳೆ ಲಕ್ಷ್ಮಿದೇವಿ, ಬಸವನಗೌಡ ಮನೆಯಿಂದ ಓಡಿ ಬಂದಿದ್ದು, ನಾಗರಾಜ್ ಹಾಗೂ ಅಭಿ ಬೆಂಕಿಗೆ ಸಿಲುಕಿ ನರಳಾಡಿದ್ದಾರೆ.
ಈ ವೇಳೆ ಪಕ್ಕದ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಮನೆ ಮಾಲೀಕ ಶಿವಶಂಕರ್ ಬೆಂಕಿ ಹಾರಿಸಲು ಮುಂದಾಗಿದ್ದರು. ಅಭಿಷೇಕ್ನನ್ನು ಉಳಿಸಲು ಶ್ರೀನಿವಾಸ್ ಹೋಗಿದ್ದು, ಇತ್ತ ನಾಗರಾಜ್ರನ್ನು ಉಳಿಸಲು ಹೋಗಿದ್ದ ಶಿವಶಂಕರ್ಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಿಯರು ಬೆಂಕಿ ತಗುಲಿದವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಪೇಂಟ್ ತಯಾರಿಕಾ ಕಂಪನಿಯಲ್ಲಿ ಬೆಂಕಿ
ಕೋಲಾರ: ಕೆಮಿಕಲ್ ಮಿಕ್ಸ್ ಮಾಡುವ ವೇಳೆ ಪೇಂಟ್ ತಯಾರಿಕಾ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು ಅಗ್ನಿ ಅವಘಡ ಸಂಭವಿಸಿದ್ದ ಘಟನೆ ಇತ್ತೀಚೆಗೆ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ನಡೆದಿತ್ತು. ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ಸೌತ್ ಪೀಲ್ಡ್ ಅನ್ನೋ ಪೇಂಟ್ ತಯಾರಿಕಾ ಕಂಪನಿಯಲ್ಲಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಇದನ್ನೂ ಓದಿ: ವಧು ಮೇಲೆ ಅನುಮಾನಪಟ್ಟು ತಾಳಿಕಟ್ಟುವ ವೇಳೆ ಮದುವೆ ಒಲ್ಲೆ ಎಂದು ಮಂಟಪದಿಂದ ಹೊರನಡೆದ ವರ
ನಾಲ್ಕಕ್ಕೂ ಹೆಚ್ಚು ಅಗ್ನಿ ಶಾಮಕ ದಳ ಸಿಬ್ಬಂದಿಗಳಿಂದ ಸತತ 6 ಗಂಟೆಗಳ ಕಾಲ ತೀವ್ರ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಲಾಗಿತ್ತು. ಅಲ್ಲದೆ ಬೆಂಕಿಯ ಕನ್ನಾಲಗೆ ಹೆಚ್ಚಾಗಿ ಕೆಮಿಕಲ್ ಹೊತ್ತಿ ಉರಿದ ಹಿನ್ನೆಲೆ ಕೆಲಕಾಲ ಸ್ಥಳೀಯರಲ್ಲಿ ಆತಂಕದ ಛಾಯೆ ಎದುರಾಗಿತ್ತು. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ವರದಿ: ಮಂಜುನಾಥ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




