AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಆಫ್ರಿಕಾದ 32 ವರ್ಷದ ಮಹಿಳೆಯ ಮೃತದೇಹ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಅದು ಬೆಂಗಳೂರು ಹೊರವಲಯದ ನಿರ್ಜನ ಪ್ರದೇಶ. ವೆಹಿಕಲ್ ಪಾರ್ಕಿಂಗ್ ಗೆ ಎಂದು ಕ್ಲೀನ್ ಮಾಡಿಸಿದ್ದ ಪ್ರದೇಶದಲ್ಲಿ ವಿದೇಶಿ ಮಹಿಳೆ ಮೃತದೇಹ ಪತ್ತೆಯಾಗಿದ್ದು. ಹಂತಕರು ಬೇರೆಡೆ ಮಹಿಳೆ ಕೊಂದು ಮೃತದೇಹ ಎಸೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದ್ರೆ ಯಾರು ಮೃತ ವಿದೇಶಿ ಮಹಿಳೆ? ಯಾವ ದೇಶದವಳು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ಆಫ್ರಿಕಾದ 32 ವರ್ಷದ ಮಹಿಳೆಯ ಮೃತದೇಹ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ
ಪ್ರಾತಿನಿಧಿಕ ಚಿತ್ರ
Shivaprasad B
| Updated By: ರಮೇಶ್ ಬಿ. ಜವಳಗೇರಾ|

Updated on: Apr 30, 2025 | 9:01 PM

Share

ಬೆಂಗಳೂರು, (ಏಪ್ರಿಲ್ 30): ಬೆಂಗಳೂರು (Bengaluru) ಹೊರವಲಯದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ತರಹುಣಸೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ವಿದೇಶಿ ಮಹಿಳೆಯ ಮೃತದೇಹ (Nigerian woman dead Body) ಪತ್ತೆಯಾಗಿದೆ. ಬೆಟ್ಟಹಲಸೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತಳನ್ನು ಆಫ್ರಿಕಾದ ನೈಜೀರಿಯಾದ ಕ್ರಾಸ್ ರಿವರ್ ಮೂಲದ ಲೋವೆತ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಜಾಲ ಠಾಣೆ ಪೊಲೀಸರು (chikkajala police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ನಿರ್ಜನ ಪ್ರದೇಶದಲ್ಲಿ ಪತ್ತೆಯಾದ 32 ವರ್ಷದ ಮಹಿಳೆ ಲೋವಿತ್ ಎಂಬುದು ಗೊತ್ತಾಗಿದೆ. ಮೃತಳ ಪಾಸ್ ಪೋರ್ಟ್ ಚಿಕ್ಕ ಮಜಾಲ ಪೊಲೀಸರಿಗೆ ಪತ್ತೆಯಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿದ್ದಳು ಎಂದು ತಿಳಿದುಬಂದಿದೆ. ಮೃತ ಮಹಿಳೆ ಮೂಲತಃ ಆಫ್ರಿಕಾದ ಕ್ರಾಸ್ ರಿವರ್ ರಾಜ್ಯದ ಮಹಿಳೆ‌. ಮಹಿಳೆ ಹಿನ್ನಲೆ ಪರಿಶೀಲನೆ ನಡೆಸ್ತಿರುವ ಪೊಲೀಸರು, ಆಕೆ ಭಾರತಕ್ಕೆ ಬಂದಿದ್ದರ ಹಿಂದಿನ ಉದ್ದೇಶವೇನು? ಕಳೆದ ರಾತ್ರಿ ಕೊಲೆಗೂ ಮುನ್ನ ಆಕೆ ಸಂಪರ್ಕದಲ್ಲಿದ್ದವರು ಯಾರು ಎನ್ನುವುದರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ಪೋರೆ‌ನ್ಸಿಕ್ ತಂಡದೊಂದಿಗೆ ಕೃತ್ಯ ನಡೆದ ಕ್ರೈಂ ಸ್ಪಾಟ್ ಗೆ ದೌಡಯಿಸಿದ ಚಿಕ್ಕಜಾಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತಳ ಗುರುತು ಪತ್ತೆಹಚ್ಚಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿ ಹತ್ಯೆಯ ಕಾರಣ ನಿಗೂಢ: ಬೂದಿಮುಚ್ಚಿದ ಕೆಂಡವಾದ ಕರಾವಳಿ..!

ವಿದೇಶಿ ಮಹಿಳೆ ಮೃತದೇಹ ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಲೋವಿತ ಸಂಪರ್ಕದಲ್ಲಿದ್ದವರನ್ನು ಕರೆಸಿ ವಿಚಾರಣೆ ಮುಂದಿವರೆಸಿದ್ದು, ಕೊಲೆಗೆ ಕಾರಣವೇನು ಅನ್ನೋದರ ಕುರಿತು ಚಿಕ್ಕಜಾಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ
Image
ಮುಸ್ಲಿಂ ವ್ಯಕ್ತಿ ಹತ್ಯೆಯ ಕಾರಣ ನಿಗೂಢ: ಬೂದಿಮುಚ್ಚಿದ ಕೆಂಡವಾದ ಕರಾವಳಿ..!
Image
ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ಎಂದಿದ್ದಕ್ಕೆ ನಡೀತಾ ಕೊಲೆ?
Image
ಬೇರೆ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳ ಕೊಲೆ ಮಾಡಿ ನದಿಗೆ ಎಸೆದ ತಂದೆ
Image
ಇನ್ಸ್ಟಾಗ್ರಾಮ್​ನಲ್ಲಿ ರಾಯಚೂರು-ಚಾಮರಾಜನಗರ ನಂಟು: ಯುವತಿ ಕೊರಳಿಗೆ 3 ಗಂಟು!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ