ಕಲಬುರಗಿ ಗ್ರಾಮಾಂತರ ಸಿಪಿಐ ಇಲ್ಲಾಳ್ ಕುಟುಂಬಕ್ಕೆ ಫೋನ್ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಧೈರ್ಯ ತುಂಬಿದರು!

ಕಲಬುರಗಿ ಗ್ರಾಮಾಂತರ ಸಿಪಿಐ ಇಲ್ಲಾಳ್ ಕುಟುಂಬಕ್ಕೆ ಫೋನ್ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಧೈರ್ಯ ತುಂಬಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 26, 2022 | 1:21 PM

ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡುವ ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಅಧಿಕಾರಿಯ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ಅವರಲ್ಲಿ ವಿಶ್ವಾಸ ತುಂಬಿದರು.

ಶಿವಮೊಗ್ಗ: ಮಹಾರಾಷ್ಟ್ರದ ಗಾಂಜಾ ದಂಧೆ ಮಾಡುವವರಿಂದ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿರುವ ಕಲಬುರಗಿ ಗ್ರಾಮಾಂತರ ಸಿಪಿಐ ಶ್ರೀಮಂತ ಇಲ್ಲಾಳ್ (Srimanth Illal) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯಿಂದ ಬೆಂಗಳೂರಿಗೆ ಏರ್ ಲಿಫ್ಟ್ (airlift) ಮಾಡುವ ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಪೊಲೀಸ್ ಅಧಿಕಾರಿಯ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ಅವರಲ್ಲಿ ವಿಶ್ವಾಸ ತುಂಬಿದರು. ವೈದ್ಯಕೀಯ ಖರ್ಚಿನ ಬಗ್ಗೆ ಯೋಚಿಸುವ ಅಗತ್ಯ ಕುಟುಂಬಕ್ಕಿಲ್ಲ, ಅದೆಲ್ಲವನ್ನು ಇಲಾಖೆ ನೋಡಿಕೊಳ್ಳುತ್ತದೆ. ಅವರೀಗ ಅಪಾಯದಿಂದ ಪಾರಾಗಿದ್ದಾರೆ ಅಂತ ತಮಗೆ ತಿಳಿಸಲಾಗಿದೆ ಮತ್ತು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ, ಕಲಬುರಗಿಯ ಪೊಲೀಸ್ ವರಿಷ್ಠಾಧಿಕಾರಿ ಅದನ್ನೆಲ್ಲ ನೋಡಿಕೊಳ್ಳುತ್ತಾರೆ ಎಂದು ಸಚಿವರು ಹೇಳುತ್ತಿರುವುದನ್ನು ಕೇಳಬಹುದು.

Published on: Sep 26, 2022 01:21 PM