ತಮಗೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಗೃಹಸಚಿವ ಪರಮೇಶ್ವರ್, ಗೊತ್ತಿಲ್ಲ ಅಂತ ಹೇಳಿದರು

Updated on: Apr 25, 2025 | 1:39 PM

ಪಹಲ್ಗಾಮ್ ಉಗ್ರವಾದಿಗಳ ಪರ ಸಹಾನುಭೂತಿ ವ್ಯಕ್ತಪಡಿಸಿರುವ ಉದ್ಯಮಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾರನ್ನು ಸರ್ಕಾರ ಬಂಧಿಸಬೇಕು ಇಲ್ಲವೇ ಗುಂಡಿಕ್ಕಿ ಕೊಲ್ಲಬೇಕು ಎಂದು ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅಂಥ ಹೇಳಿಕೆಗಳಿಗೆಲ್ಲ ನಾನು ಹೇಗೆ ಉತ್ತರ ಕೊಡಲಾದೀತು ಎಂದು ಹೇಳುತ್ತಾರೆ.

ಬೆಂಗಳೂರು, ಏಪ್ರಿಲ್ 25: ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಮಾಧ್ಯಮಗಳು ರಾಜ್ಯದಲ್ಲಿ ನಡೆಯುವ ಅಪರಾಧಿಕ ಘಟನೆಗಳ ಬಗ್ಗೆ ಪ್ರಶ್ನೆ ಕೇಳಿದರೆ ಹೆಚ್ಚಿನ ಸಲ ನನಗೆ ಗೊತ್ತಿಲ್ಲ, ನನ್ನ ಗಮನಕ್ಕಿನ್ನೂ ಬಂದಿಲ್ಲ ಅಂತಲೇ ಪ್ರತಿಕ್ರಿಯಿಸೋದು. ರಾಜ್ಯದ ಒಂದು ಭಾಗದಲ್ಲಿ ಪಾಕಿಸ್ತಾನದ ಧ್ವಜಗಳನ್ನು (Pakistan flags) ರಸ್ತೆ ಬದಿ ಹಾರಿಸಿದ್ದು ಮತ್ತು ಪೊಲೀಸರು ಅವುಗಳನ್ನು ತೆಗೆಸಿರೋ ವಿಚಾರ ಅವರ ಗಮನಕ್ಕೆ ತಂದಾಗ ಪರಮೇಶ್ವರ್, ನೀವು ಹೇಳಿದ ಬಳಿಕ ವಿಷಯ ಗೊತ್ತಾಗಿದ್ದು ವಿಚಾರಿಸುತ್ತೇನೆ ಅನ್ನುತ್ತಾರೆ. ಈಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ದಾಳಿ ನಡೆಸಿದ ವಿಷಯದಲ್ಲೂ ಅವರದ್ದು ಹೆಚ್ಚು ಕಡಿಮೆ ಅದೇ ಪ್ರತಿಕ್ರಿಯೆ.

ಇದನ್ನೂ ಓದಿ: ಪಹಲ್​ಗಾಮ್ ದಾಳಿ: ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ