36 ಎಸೆತಗಳಲ್ಲಿ 124 ರನ್..! 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಅಫ್ರಿದಿ
Abbas Afridi's 6 Sixes: ಹಾಂಗ್ ಕಾಂಗ್ ಸಿಕ್ಸಸ್ ಲೀಗ್ನಲ್ಲಿ ಪಾಕಿಸ್ತಾನ ತಂಡ ಕುವೈತ್ ವಿರುದ್ಧ ಭರ್ಜರಿ ಜಯ ಗಳಿಸಿದೆ. ನಾಯಕ ಅಬ್ಬಾಸ್ ಅಫ್ರಿದಿ ಕೇವಲ 12 ಎಸೆತಗಳಲ್ಲಿ ಅಜೇಯ 55 ರನ್ ಸಿಡಿಸಿ ಮಿಂಚಿದರು. ಅವರ ಇನ್ನಿಂಗ್ಸ್‌ನಲ್ಲಿ ಎಂಟು ಸಿಕ್ಸರ್‌ಗಳು ಸೇರಿದ್ದವು. ವಿಶೇಷವಾಗಿ, ಅಫ್ರಿದಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದರು.
ಹಾಂಗ್ ಕಾಂಗ್ ಸಿಕ್ಸಸ್ ಲೀಗ್ನಲ್ಲಿ ಕುವೈತ್ ತಂಡದ ವಿರುದ್ಧ ಪಾಕಿಸ್ತಾನ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕುವೈತ್, 6 ಓವರ್‌ಗಳಲ್ಲಿ ಬರೋಬ್ಬರಿ 123 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೊನೆಯ ಎಸೆತದಲ್ಲಿ ಅಂದರೆ 36 ನೇ ಎಸೆತದಲ್ಲಿ 124 ರನ್ಗಳ ಗುರಿ ಬೆನ್ನಟ್ಟಿತು. ಪಾಕಿಸ್ತಾನ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ಅಬ್ಬಾಸ್ ಅಫ್ರಿದಿ ಕೇವಲ 12 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿದರು. ಅದರಲ್ಲೂ ಒಂದೇ ಓವರ್‌ನಲ್ಲಿ ಅಂದರೆ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಸಹ ಹೊಡೆದರು. ಈ ಪಂದ್ಯದಲ್ಲಿ 458 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಬ್ಬಾಸ್ ಅಫ್ರಿದಿ 8 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು.
6 ಎಸೆತಗಳಲ್ಲಿ 6 ಸಿಕ್ಸರ್
ಪಾಕಿಸ್ತಾನ ನಾಯಕ ಅಬ್ಬಾಸ್ ಅಫ್ರಿದಿ ಕುವೈತ್ನ ಯಾಸಿನ್ ಪಟೇಲ್ ಅವರ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಪಟೇಲ್ ಅವರ ಮೊದಲ ಎಸೆತದಲ್ಲಿ ಫ್ರಂಟ್-ಫೂಟ್ ಸಿಕ್ಸರ್, ಲಾಂಗ್-ಆನ್‌ನಲ್ಲಿ ಸಿಕ್ಸರ್ ನಂತರ ಮಿಡ್-ವಿಕೆಟ್‌ನಲ್ಲಿ ಮುಂದಿನ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಐದನೇ ಎಸೆತದಲ್ಲಿ ಲಾಂಗ್-ಆಫ್‌ನಲ್ಲಿ ಸಿಕ್ಸರ್ ಬಾರಿಸಿದ ಅವರು ಕೊನೆಯ ಎಸೆತದಲ್ಲಿ ಫೈನ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು. ಈ ಮೂಲಕ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಕಲೆಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

