Horoscope Today: ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಅಕ್ಟೋಬರ್ 12, ಸೋಮವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಅಕ್ಟೋಬರ್ 12, ಸೋಮವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಆಶ್ವೀಜ ಮಾಸದ ಶರದೃತು, ಶುಕ್ಲಪಕ್ಷದ ಬಿದಿಗೆ, ಸ್ವಾತಿ ನಕ್ಷತ್ರ ಇರಲಿದೆ.
ಇಂದು ನವರಾತ್ರಿಯ ಎರಡನೇ ದಿನವಾಗಿದ್ದು, ಮಹಾದೇವಿಯನ್ನು ಬ್ರಹ್ಮಚಾರಿಣಿ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಈ ದೇವಿಯನ್ನು ಪೂಜಿಸುವುದರಿಂದ ಶಿಸ್ತು, ಕ್ರಮಬದ್ಧತೆ, ತಪಸ್ಸು ಮತ್ತು ನಿಷ್ಠೆಯ ಫಲ ದೊರೆಯುತ್ತದೆ. ಪುಳಿಯೋಗರೆ ಅಥವಾ ಹೆಸರು ಬೇಳೆಯಿಂದ ಮಾಡಿದ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸಬಹುದು. ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ ಮಂತ್ರ ಜಪಿಸುವುದರಿಂದ ಶುಭಫಲಗಳು ಪ್ರಾಪ್ತಿಯಾಗುತ್ತವೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
