Horoscope Today: ಇಂದು ಕಾಳರಾತ್ರಿಯ ಆರಾಧನೆಯ ದಿನ; ಈ ಎಲ್ಲಾ ರಾಶಿಗಳಿಗೆ ಶುಭದಿನ

Updated on: Oct 17, 2026 | 6:22 AM

ಅಕ್ಟೋಬರ್ 17, ಶನಿವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಅಕ್ಟೋಬರ್ 17, ಶನಿವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಶ್ವೀಜ ಮಾಸದ ಶರದೃತು ಶುಕ್ಲಪಕ್ಷ ಸಪ್ತಮಿ, ಮೂಲಾ ನಕ್ಷತ್ರ, ಅತಿಗಂಡ ಯೋಗ ಮತ್ತು ಗರಜಕರಣ ಇರತಕ್ಕಂತ ಈ ದಿನವು ನವರಾತ್ರಿಯ ನವ ದಿನಗಳಲ್ಲಿ ಒಂದಾಗಿದೆ.

ಈ ದಿನ ರಾಹುಕಾಲ ಬೆಳಗ್ಗೆ 9:06 ರಿಂದ 10:35 ರವರೆಗೆ ಇರಲಿದ್ದು, ಸರ್ವ ಸಿದ್ಧಿ ಕಾಲವು ಮಧ್ಯಾಹ್ನ 1:33 ರಿಂದ 3:02 ರವರೆಗೆ ಇರುತ್ತದೆ. ಅಕ್ಟೋಬರ್ 17 ಕಾಳರಾತ್ರಿ ದೇವಿಯನ್ನು ಆಚರಿಸುವ ದಿನವಾಗಿದೆ. ಕಾಳರಾತ್ರಿ ದೇವಿಗೆ ಪುಸ್ತಕಗಳನ್ನು ಅರ್ಪಿಸುವುದು, ಸಂಗೀತದ ಪರಿಕರಗಳಿಗೆ ಪೂಜೆ ಮಾಡುವುದು ಹಾಗೂ ಬೆಲ್ಲದ ಪಾಯಸವನ್ನು ನೈವೇದ್ಯವಾಗಿ ಅರ್ಪಿಸುವುದು ಶುಭಕರ. ಈ ದಿನ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ಅತ್ಯಂತ ಶ್ರೇಷ್ಠ. “ಓಂ ದೇವಿ ಕಾಳರಾತ್ರಿಯೇ ನಮಃ” ಎಂಬ ಮಂತ್ರ ಜಪದಿಂದ ಉತ್ತಮ ಫಲ ಸಿಗುತ್ತದೆ. ಮಹಿಷಾಸುರನನ್ನು ಸಂಹಾರ ಮಾಡಿದ ಪ್ರಥಮ ಘಟ್ಟವೂ ಇದೇ ದಿನ ಸಂಭವಿಸಿದೆ ಎಂದು ಗುರೂಜಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More