Horoscope Today: ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ನವೆಂಬರ್ 07, ಶನಿವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 07, ಶನಿವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಶ್ವೀಜ ಮಾಸ, ಶರದ್ ಋತು, ಕೃಷ್ಣಪಕ್ಷಕ್ಕೆ ಸೇರಿದೆ. ಅಂದು ತ್ರಯೋದಶಿ ತಿಥಿ ಚಿತ್ತಾ ನಕ್ಷತ್ರ, ಪ್ರೀತಿ ಯೋಗ ಮತ್ತು ವಣಿಕ ಕರಣ ಇರತಕ್ಕಂತಹ ದಿನವಾಗಿದೆ. ತ್ರಯೋದಶಿಯು ಬೆಳಗ್ಗೆ 10 ಗಂಟೆ 47 ನಿಮಿಷದವರೆಗೆ ಇದ್ದು, ನಂತರ ಚತುರ್ದಶಿ ತಿಥಿ ಪ್ರವೇಶಿಸುತ್ತದೆ. ಸೂರ್ಯೋದಯ ಕಾಲದಲ್ಲಿ ಇರುವ ತಿಥಿಗೆ ಜ್ಯೋತಿಷ್ಯದಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.
ಶನಿವಾರವು ಸಾಕ್ಷಾತ್ ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮನ ಆಶೀರ್ವಾದಗಳನ್ನು ಪಡೆಯಲು ಬಹಳ ಪವಿತ್ರವಾದ ದಿನವಾಗಿದೆ. ಜೊತೆಗೆ, ಇದು ಮಾಸ ಶಿವರಾತ್ರಿಯ ದಿನವೂ ಆಗಿದ್ದು, ಈ ದಿನದ ಆಧ್ಯಾತ್ಮಿಕ ಮಹತ್ವವನ್ನು ಹೆಚ್ಚಿಸುತ್ತದೆ. ಡಾ. ಬಸವರಾಜ ಗುರೂಜಿ ಅವರು ಈ ವಿಶೇಷ ದಿನದಂದು ಗ್ರಹಗತಿಗಳ ಸ್ಥಿತಿ ಮತ್ತು ಅವುಗಳ ಪ್ರಭಾವದ ಕುರಿತು ವಿಶ್ಲೇಷಣೆ ನೀಡಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
