Loading video

Video: ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾಗಿ ಬಿದ್ರು, ಒಬ್ಬರ ಪ್ರಾಣನೂ ಉಳೀಲಿಲ್ಲ

Updated on: Jun 02, 2025 | 2:09 PM

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರ-ವಾರಾಣಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಎಸ್​ಯುವಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ಸವಾರರು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದ್ದಾರೆ. ಇಬ್ಬರನ್ನು ಬಾನೆಟ್ ಮೇಲೆ ಸುಮಾರು 100 ಮೀಟರ್‌ಗಳಷ್ಟು ಎಳೆದೊಯ್ಯಲಾಗಿತ್ತು. ಅಪಾಚೆಯಲ್ಲಿ ಕುಳಿತಿದ್ದ ನಾಲ್ವರು ಸ್ನೇಹಿತರು ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾರೆ.

ಗೋರಖ್​ಪುರ, ಜೂನ್ 02: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರ-ವಾರಾಣಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಎಸ್​ಯುವಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ಸವಾರರು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದ್ದಾರೆ. ಇಬ್ಬರನ್ನು ಬಾನೆಟ್ ಮೇಲೆ ಸುಮಾರು 100 ಮೀಟರ್‌ಗಳಷ್ಟು ಎಳೆದೊಯ್ಯಲಾಗಿತ್ತು.
ಅಪಾಚೆಯಲ್ಲಿ ಕುಳಿತಿದ್ದ ನಾಲ್ವರು ಸ್ನೇಹಿತರು ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾರೆ.

ಎದುರಿನಿಂದ ಬರುತ್ತಿದ್ದ ಎಸ್​ಯುವಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಮೃತ ನಾಲ್ವರಲ್ಲಿ ರಾಹುಲ್​​ ಎಂಬುವವನ ನಿಶ್ಚಿತಾರ್ಥ ಜೂನ್ 1ರಂದು ನಿದಿಯಾಗಿತ್ತು. ಆತನ ಸ್ನೇಹಿತ ಅರವಿಂದ್ ಕೇವಲ ಒಂದು ವಾರದ ಹಿಂದೆ ಬ್ಯಾಂಕಾಕ್‌ನಿಂದ ಹಿಂತಿರುಗಿದ್ದರು. ಉಳಿದಿಬ್ಬರಿಗೂ ಮದುವೆಯಾಗಿ ಮಕ್ಕಳಿದ್ದಾರೆ. ಕಾಣೆಯಾದ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ತನಿಖೆ ನಡೆಯುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ