ಉತ್ತರ ಕನ್ನಡ: ನಿರಂತರ ಮಳೆಗೆ ಜೀವ ಕಳೆ ಪಡೆದುಕೊಂಡ ಹೊಸದೇವತಾ ಫಾಲ್ಸ್

ಉತ್ತರ ಕನ್ನಡ: ನಿರಂತರ ಮಳೆಗೆ ಜೀವ ಕಳೆ ಪಡೆದುಕೊಂಡ ಹೊಸದೇವತಾ ಫಾಲ್ಸ್

ಕಿರಣ್ ಹನುಮಂತ್​ ಮಾದಾರ್
|

Updated on:Jul 14, 2024 | 5:29 PM

ಮಳೆಗಾಲ ಶುರುವಾಗುತ್ತಿದ್ದಂತೆ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಅದರಂತೆ ಜಲಪಾತಗಳ ತವರೂರಾದ ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಕೇಳುವುದೇ ಬೇಡ. ಮಲೆಗಾಲದಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತದೆ. ಇದೀಗ ನಿರಂತರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸನ ಕುದ್ರಿಯಲ್ಲಿರುವ ಹೊಸದೇವನ ಫಾಲ್ಸ್ ಜೀವ ಕಳೆ ಪಡೆದುಕೊಂಡಿದೆ.

ಉತ್ತರ ಕನ್ನಡ, ಜು.14: ಮಳೆಗಾಲ ಬಂದರೆ ಸಾಕು ಪರಿಸರ ಹೊಸದೊಂದು ಲೋಕವನ್ನೇ ಸೃಷ್ಟಿಸುತ್ತದೆ. ಅದರಲ್ಲೂ ಪ್ರಕೃತಿ ಪ್ರಿಯರಿಗೊಂತು ಸ್ವರ್ಗ ಎಂದರೆ ತಪ್ಪಾಗಲಾರದು. ಇನ್ನು ಜಲಪಾತಗಳ ತವರೂರಾದ ಉತ್ತರ ಕನ್ನಡ ಜಿಲ್ಲೆಯಲ್ಲಂತೂ ಕೇಳುವುದೇ ಬೇಡ. ಮಲೆಗಾಲದಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತದೆ. ಅದರಂತೆ ಇದೀಗ ನಿರಂತರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸನ ಕುದ್ರಿಯಲ್ಲಿರುವ ಹೊಸದೇವತಾ ಫಾಲ್ಸ್ ಜೀವ ಕಳೆ ಪಡೆದುಕೊಂಡಿದೆ. ಇದರ ವಿಶೇಷತೆ ಅಂದರೆ ‘ಮಳೆಗಾಲದಲ್ಲಿ ಮಾತ್ರ ಈ ಹೊಸದೇವನ ಫಾಲ್ಸ್​ಗೆ ಕಳೆ ಬರುತ್ತದೆ. ಜೊತೆಗೆ ಇಲ್ಲಿರುವ ಗುಳಿ ಹಳ್ಳ ತುಂಬಿದ್ದರಿಂದ ಹೊಸದೇವನ ಫಾಲ್ಸ್ ಹಾಲ್ನೊರೆಯಂತೆ ಹರಿಯುತ್ತಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 14, 2024 05:25 PM