ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ; ವಿಭೂತಿ ಫಾಲ್ಸ್​ಗೆ ಜೀವ ಕಳೆ

ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ; ವಿಭೂತಿ ಫಾಲ್ಸ್​ಗೆ ಜೀವ ಕಳೆ

ಕಿರಣ್ ಹನುಮಂತ್​ ಮಾದಾರ್
|

Updated on: Jul 09, 2024 | 4:49 PM

ಮಳೆಗಾಲ ಆರಂಭವಾಗುವುದನ್ನೇ ಕಾದುಕುಳಿತಿದ್ದ ಪ್ರಕೃತಿ ಪ್ರೀಯರಿಗೆ, ಮಳೆಗಾಲ ಸ್ವರ್ಗದಂತೆ ಭಾಸವಾಗುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಫಾಲ್ಸ್​ಗೆ ಇದೀಗ ಜೀವ ಕಳೆ ಬಂದಿದೆ. ಆದರೆ, ಮೈತುಂಬಿ ಹರಿಯುತ್ತಿರುವ ವಿಭೂತಿ ಫಾಲ್ಸ್ ನೋಡಲು ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿಷೇಧ ಮಾಡಿ ಬೋರ್ಡ್ ಹಾಕಿದೆ.

ಉತ್ತರ ಕನ್ನಡ, ಜು.09: ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಪಾತಗಳ ಜಿಲ್ಲೆಯಲ್ಲಿ ಫಾಲ್ಸ್​ಗಳು ಮೈತುಂಬಿ ಹರಿಯುತ್ತಿದೆ. ಹೌದು, ಮಳೆಗಾಲ ಆರಂಭವಾಗುವುದನ್ನೇ ಕಾದುಕುಳಿತಿದ್ದ ಪ್ರಕೃತಿ ಪ್ರೀಯರಿಗೆ, ಮಳೆಗಾಲ ಸ್ವರ್ಗದಂತೆ ಭಾಸವಾಗುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಫಾಲ್ಸ್​ಗೆ ಇದೀಗ ಜೀವ ಕಳೆ ಬಂದಿದೆ. ಆದರೆ, ಮೈತುಂಬಿ ಹರಿಯುತ್ತಿರುವ ವಿಭೂತಿ ಫಾಲ್ಸ್ ನೋಡಲು ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿಷೇಧ ಮಾಡಿ ಬೋರ್ಡ್ ಹಾಕಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಿಸಲಾಗಿದೆ. ಕಾಡಿನ ಮಧ್ಯದ ಬೆಟ್ಟ ಸಿಳಿ ಬರುವ ಜಲಪಾತವನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಇದೀಗ ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ವಿಭೂತಿ ಫಾಲ್ಸ್​ ಬೀಕೋ ಅಂತಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ