ಇಡೀ ಪ್ರಕರಣದಲ್ಲಿ ದರ್ಶನ್​ ಎಡವಿದ್ದು ಎಲ್ಲಿ? ಎಳೆಎಳೆಯಾಗಿ ವಿವರಿಸಿದ ಮುಖ್ಯಮಂತ್ರಿ ಚಂದ್ರು

ಇಡೀ ಪ್ರಕರಣದಲ್ಲಿ ದರ್ಶನ್​ ಎಡವಿದ್ದು ಎಲ್ಲಿ? ಎಳೆಎಳೆಯಾಗಿ ವಿವರಿಸಿದ ಮುಖ್ಯಮಂತ್ರಿ ಚಂದ್ರು

Mangala RR
| Updated By: ಮದನ್​ ಕುಮಾರ್​

Updated on: Jul 09, 2024 | 5:30 PM

ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದನ್ನು ಎಲ್ಲರೂ ಖಂಡಿಸುತ್ತಿದ್ದಾರೆ. ಆದರೆ ಕಿಡಿಗೇಡಿಗಳು ಆತನನ್ನು ಕೊಂದಿರುವುದು ಅದಕ್ಕಿಂತಲೂ ದೊಡ್ಡ ತಪ್ಪು. ಈ ವಿಚಾರದ ಬಗ್ಗೆ ಸ್ಯಾಂಡಲ್​ವುಡ್​ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಹಿರಿಯ ನಟ, ರಂಗಕರ್ಮಿ ಮುಖ್ಯಮಂತ್ರಿ ಚಂದ್ರು ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ನಟ ದರ್ಶನ್​ ಅವರು ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾಗಿದೆ. ಅದೇ ಕಾರಣಕ್ಕಾಗಿ ಆತನನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ ಹಾಗೂ ಅವರ ಸಹಚರರು ಜೈಲು ಸೇರಿದ್ದಾರೆ. ಈ ಕೇಸ್​ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿದ್ದಾರೆ. ‘ರೇಣುಕಾ ಸ್ವಾಮಿ ನಡೆದುಕೊಂಡ ರೀತಿ ಮಹಾಪರಾಧ. ಆತನಿಂದ ಕುಟುಂಬದವರಿಗೆ ನೋವಾಗಿದೆ. ಅವರನ್ನು ಕರೆಸಿ ಬುದ್ಧಿ ಹೇಳಿದರೆ ಸಾಕಿತ್ತು. ಅದೂ ಅಲ್ಲದಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ಈ ಎಲ್ಲ ಸಾಧ್ಯತೆಗಳನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಳ್ಳಬಾರದಿತ್ತು. ರೇಣುಕಾ ಸ್ವಾಮಿಯನ್ನು ಕರೆಸಿ ಮಾತನಾಡಿದ ಸ್ಥಳ ಕೂಡ ಸೂಕ್ತವಾದದ್ದಲ್ಲ. ತಮ್ಮ ಜೊತೆಗಿದ್ದ ಗುಂಪನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬುದು ದರ್ಶನ್​ಗೆ ಗೊತ್ತಾಗಲಿಲ್ಲ’ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.