ಶಿವಕುಮಾರ್​ಗೆ ಬುದ್ಧಿ ಇದ್ದಿದ್ದರೆ ರಾಮನಗರ-ಚನ್ನಪಟ್ಟಣ ಅವಳಿ ನಗರ ಮಾಡುವ ಬಗ್ಗೆ ಯೋಚಿಸುತ್ತಿದ್ದರು: ಹೆಚ್ ಡಿ ಕುಮಾರಸ್ವಾಮಿ

ಶಿವಕುಮಾರ್​ಗೆ ಬುದ್ಧಿ ಇದ್ದಿದ್ದರೆ ರಾಮನಗರ-ಚನ್ನಪಟ್ಟಣ ಅವಳಿ ನಗರ ಮಾಡುವ ಬಗ್ಗೆ ಯೋಚಿಸುತ್ತಿದ್ದರು: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 09, 2024 | 7:10 PM

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಕೇವಲ ಪಕ್ಷದ ಮುಖಂಡರೊಂದಿಗೆ ಮಾತ್ರ ಚರ್ಚೆ ನಡೆಸಿರುವುದಾಗಿ ಹೇಳಿದ ಕುಮಾರಸ್ವಾಮಿ, ಯೋಗೀಶ್ವರ್ ಅವರೊಂದಿಗೆ ಮಾತುಕತೆ ನಡೆಸಿ ಅಂತ ಹೇಳಿರುವುದಾಗಿ ತಿಳಿಸಿದರು.. ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರ ಜೊತೆ ಇನ್ನೂ ಮಾತುಕತೆ ನಡೆಸಿಲ್ಲ ಎಂದು ಅವರು ಹೇಳಿದರು.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯರು ತಮ್ಮ ಬದ್ಧ ರಾಜಕೀಯ ವೈರಿ ಡಿಕೆ ಶಿವಕುಮಾರ್ ರನ್ನು ಟೀಕಿಸುವುದು ಮುಂದುವರಿಸಿದರು. ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿದರೆ ಮತ್ತು ಹೆಸರು ಬೆಂಗಳೂರು ದಕ್ಷಿಣ ಅಂತಾದ್ರೆ ನೀವು ಬೆಂಗಳೂರಿನವರಾಗುತ್ತೀರಲ್ಲ ಅಂದಾಗ, ಇಲ್ಲ, ಅವರಷ್ಟೇ ಬೆಂಗಳೂರಲ್ಲಿ ಹುಟ್ಟಿ ಮಹಾನ್ ಸಾಧನೆ ಮಾಡಿದವರು, ನಮ್ಮದೆಲ್ಲ ಯಾವ ಸಾಧನೆ? ಅಂತ ಕುಮಾರಸ್ವಾಮಿ ಲೇವಡಿ ಮಾಡಿದರು. ರಾಮನಗರದ ಹೆಸರನ್ನು ಬದಲಾಯಿಸಿದರೆ ಅದರಿಂದ ಏನು ಪ್ರಯೋಜನ? ಅಲ್ಲಿನ ನಿವಾಸಿಗಳೆಲ್ಲ ತಮ್ಮ ಆಧಾರ್ ಕಾರ್ಡ್ ನಲ್ಲಿ ರಾಮನಗರದ ಬದಲು ಬೆಂಗಳೂರು ದಕ್ಷಿಣ ಅಂತ ಬದಲಾಯಿಸಿಕೊಳ್ಳಲು ಅಲೆದಾಡಬೇಕಾಗುತ್ತದೆ, ಹೆಸರು ಬದಲಾಯಿಸುವುದರಿಂದ ಇದು ಮಾತ್ರ ಆಗೋದು ಎಂದು ಕುಮಾರಸ್ವಾಮಿ ಹೇಳಿದರು, ಶಿವಕುಮಾರ್ ಅವರಿಗೆ ತಲೆಯಲ್ಲಿ ಏನಾದರೂ ಬುದ್ಧಿ ಇದ್ದಿದ್ದರೆ, ರಾಮನಗರ-ಚನ್ನಪಟ್ಟಣವನ್ನು ಅವಳಿ ನಗರಗಳನ್ನಾಗಿ ಮಾಡಿ ಹುಬ್ಬಳ್ಳಿ-ಧಾರವಾಡದ ಹಾಗೆ ಮಹಾನಗರ ಪಾಲಿಕೆ ಮಾಡುವ ಕೆಲಸ ಕೈಗೆತ್ತಿಕೊಳ್ಳಬೇಕಿತ್ತು,, ನಾನು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿದ್ದರೆ ಅದನ್ನು ಮಾಡಿರುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚನ್ನಪಟ್ಟಣ ಕ್ಷೇತ್ರದ ಮುಖಂಡರ ಸಭೆ, ಅಭ್ಯರ್ಥಿ ಆಯ್ಕೆ ಬಗ್ಗೆ ರಹಸ್ಯ ಕಾಯ್ದುಕೊಂಡ ಕುಮಾರಸ್ವಾಮಿ