ಮುಂಗಾರು ಮಳೆಗೆ ಚಾರ್ಮಾಡಿ ಘಾಟ್ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಕರ್ನಾಟಕದ ಊಟಿಯಾಗಿ ಪರಿವರ್ತನೆಯಾಗಿದೆ. ಹಸಿರು ಬೆಟ್ಟ-ಗುಡ್ಡಗಳಲ್ಲಿ ಹಾಲ್ನೊರೆಯಂತೆ ಜಲಪಾತ ಧುಮ್ಮಿಕ್ಕುತ್ತಿದ್ದು, 100 ಅಡಿ ಎತ್ತರದಿಂದ ಬಿಳುತ್ತಿರುವ ಜಲಧಾರೆಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಜೊತೆಗೆ 22 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ನೂರಾರು ಜಲಪಾತಗಳು ಸೃಷ್ಟಿಯಾಗಿದೆ.
ಚಿಕ್ಕಮಗಳೂರು, ಜು.07: ಮುಂಗಾರು ಮಳೆಗೆ ಚಾರ್ಮಾಡಿ ಘಾಟ್ನಲ್ಲಿ ಜಲವೈಭವ ನಿರ್ಮಾಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಕರ್ನಾಟಕದ ಊಟಿಯಾಗಿ ಪರಿವರ್ತನೆಯಾಗಿದೆ. ಹಸಿರು ಬೆಟ್ಟ-ಗುಡ್ಡಗಳಲ್ಲಿ ಹಾಲ್ನೊರೆಯಂತೆ ಜಲಪಾತ ಧುಮ್ಮಿಕ್ಕುತ್ತಿದ್ದು, 100 ಅಡಿ ಎತ್ತರದಿಂದ ಬಿಳುತ್ತಿರುವ ಜಲಧಾರೆಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಜೊತೆಗೆ 22 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ನೂರಾರು ಜಲಪಾತಗಳು ಸೃಷ್ಟಿಯಾಗಿದೆ. ದಟ್ಟಕಾನನದ ಮಧ್ಯೆ ನೀರಿನಿಂದ ಪ್ರಕೃತಿಯೇ ಸೃಷ್ಟಿಸಿದ ಸಂಗೀತಕ್ಕೆ ಪ್ರವಾಸಿಗರು ಮೂಕವಿಸ್ಮಿತರಾಗಿದ್ದಾರೆ. ಸೃಷ್ಠಿಯ ಮಧ್ಯೆ ಸೃಷ್ಠಿಯಾದ ಜಲಧಾರೆಗೆ ಪ್ರವಾಸಿ ಪ್ರಿಯರು ಮಾರು ಹೋಗಿದ್ದು, ರಸ್ತೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ