AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಮಾಡಿ ಘಾಟ್​ನಲ್ಲಿ ಹಸಿರು ಬೆಟ್ಟಗಳ ಮಧ್ಯೆ ಜಲವೈಭವ: ಜಲಪಾತದ ಝುಳು ಝುಳು ನಿನಾದಕ್ಕೆ ಪ್ರವಾಸಿಗರು ಫಿದಾ

ಕರ್ನಾಟಕದಲ್ಲಿ ಮುಂಗಾರು ಮಳೆ ಶುರುವಾಗಿದೆ. ಎಲ್ಲೆಡೆ ಮಳೆ ಆಗುತ್ತಿದೆ. ಪರಿಸರ ಹಸಿರು ಹಸಿರಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನಲ್ಲಿ ಮುಂಗಾರು ಮಳೆಗೆ ಜಲವೈಭವ ಸೃಷ್ಟಿಯಾಗಿದೆ. ಹಸಿರು ಬೆಟ್ಟಗಳ ನಡುವೆ ಹಾಲ್ನೊರೆಯಂತೆ ಜಲಪಾತಗಳು ಧುಮ್ಕಿಕ್ಕುತ್ತಿವೆ. ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಝುಳು ಝುಳು ನಿನಾದವನ್ನ ಹೊರಹಾಕ್ಕಿರುವ ಜಲಪಾತ ಕಂಡು ಫಿದಾ ಆಗಿದ್ದಾರೆ.

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 07, 2024 | 3:47 PM

Share
ಸದ್ಯ ಕರ್ನಾಟಕದಲ್ಲಿ ಮುಂಗಾರು ಮಳೆ ಶುರುವಾಗಿದೆ. ಒಂದು ಕಡೆ ರೈತರಿಗೆ ಸಂತಸ ಉಂಟಾದರೆ, ಮತ್ತೊಂದೆಡೆ ನಿಸರ್ಗ ಹಸಿರಿನಿಂದ ಕಂಗೊಳಿಸುತ್ತಿದೆ. ಹಲವೆಡೆ ಧಾರಾಕಾರ ಮಳೆ ಹಳ್ಳ, ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಅದೇ ರೀತಿಯಾಗಿ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ ಸೃಷ್ಟಿಯಾಗಿದೆ.

1 / 5
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನಲ್ಲಿ ಮುಂಗಾರು ಮಳೆಗೆ ಜಲವೈಭವ ಸೃಷ್ಟಿಯಾಗಿದೆ. ಹಸಿರು ಬೆಟ್ಟಗಳ ನಡುವೆ ಹಾಲ್ನೊರೆಯಂತೆ ಜಲಪಾತಗಳು ಧುಮ್ಕಿಕ್ಕುತ್ತಿವೆ. ಹೀಗಾಗಿ ಚಾರ್ಮಾಡಿ ಘಾಟ್ ಸದ್ಯ ಕರ್ನಾಟಕದ ಊಟಿಯಾಗಿದೆ.

2 / 5
22 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಸಾಗಿದರೇ ಸಾಕು ನೂರಾರು ಜಲಪಾತಗಳು ಕಾಣಸಿಗುತ್ತವೆ. 100 ಅಡಿ ಎತ್ತರದಿಂದ ಜಲಪಾತ ಧುಮ್ಕಿಕ್ಕುತ್ತಿದ್ದು, ಇದರ ಝುಳು ಝುಳು ನಿನಾದವನ್ನು ಕೇಳುತ್ತಿದ್ದರೆ ಫಿದಾ ಆಗುವುದಂತೂ ಗ್ಯಾರಂಟಿ.

3 / 5
ದಟ್ಟಕಾನನದ ಮಧ್ಯೆ ನೀರಿನಿಂದ ಪ್ರಕೃತಿಯೇ ಸೃಷ್ಟಿಸಿದ ಸಂಗೀತಕ್ಕೆ ಪ್ರವಾಸಿಗರು ಮೂಕವಿಸ್ಮಿತರಾಗುವುದಂತು ಸತ್ಯ. ನಿತ್ಯಹರಿದ್ವರ್ಣದಂತಹ ಅರಣ್ಯದಲ್ಲಿ ಪ್ರಕೃತಿಗೆ ಪ್ರಕೃತಿಯೇ ಕ್ಷೀರಾಭಿಷೇಕ ಮಾಡುತ್ತಿರುವುದನ್ನು ನೋಡಲು ಎರಡು ಕಣ್ಣುಗಳು ಸಾಲದು.

4 / 5
ರಸ್ತೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಎಂಜಾಯ್​ ಮಾಡಿದ್ದಾರೆ. ಒಟ್ಟಿನಲ್ಲಿ ಚಾರ್ಮಾಡಿ ಸೌಂದರ್ಯ ವರ್ಣಿಸುವುದಕ್ಕೆ ಪದ ಸಾಲದು, ಬರೆಯುವುದಕ್ಕೆ ಪುಟ ಸಾಲದು.

5 / 5