- Kannada News Photo gallery Cricket photos IND vs ZIM 2nd T20I rinku singh hit 5 sixes and broke suryakunar yadav record
IND vs ZIM: ಕೊನೆಯ 2 ಓವರ್‌ಗಳಲ್ಲಿ ಸಿಕ್ಸರ್ ಮಳೆ; ಸೂರ್ಯನ ದಾಖಲೆ ಮುರಿದ ರಿಂಕು..!
Rinku Singh: ರಿಂಕು ಸಿಂಗ್ ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿ 5 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ 48 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆದರೆ, ಕೇವಲ 2 ರನ್‌ಗಳಿಂದ ಅರ್ಧಶತಕ ಪೂರೈಸುವಲ್ಲಿ ವಂಚಿತರಾದರು. ಈ 5 ಸಿಕ್ಸರ್‌ಗಳ ನೆರವಿನಿಂದ ರಿಂಕು ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಮುರಿದರು.
Updated on: Jul 07, 2024 | 10:05 PM

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯವನ್ನು 100 ರನ್‌ಗಳಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ, ಮೊದಲ ಟಿ20 ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದಲ್ಲದೆ, ಸರಣಿಯನ್ನು 1-1 ರಿಂದ ಸಮಬಲಗೊಳಿಸುವಲ್ಲಿಯೂ ಯಶಸ್ವಿಯಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತು. ಇದು ಜಿಂಬಾಬ್ವೆ ವಿರುದ್ಧ ಟಿ20ಯಲ್ಲಿ ಭಾರತ ಕಲೆಹಾಕಿದ ಅತ್ಯುತ್ತಮ ಸ್ಕೋರ್ ಆಗಿದೆ. ಅಲ್ಲದೆ ಹರಾರೆ ಮೈದಾನದಲ್ಲಿ ಯಾವುದೇ ತಂಡ ಕಲೆಹಾಕಿದ ಅತಿದೊಡ್ಡ ಮೊತ್ತ ಕೂಡ ಇದಾಗಿದೆ.

ಅಲ್ಲದೆ ಈ ಪಂದ್ಯದ ಕೊನೆಯ 5 ಓವರ್‌ಗಳಲ್ಲಿ ಅಂದರೆ 30 ಎಸೆತಗಳಲ್ಲಿ ಭಾರತ 82 ರನ್ ಗಳಿಸಿದರೆ, ಕೊನೆಯ 10 ಓವರ್‌ಗಳಲ್ಲಿ ಅಂದರೆ 60 ಎಸೆತಗಳಲ್ಲಿ ಟೀಂ ಇಂಡಿಯಾ ಬರೋಬ್ಬರಿ 160 ರನ್ ಕಲೆಹಾಕಿತು. ಇದರೊಂದಿಗೆ ಟಿ20ಯಲ್ಲಿ ಕೊನೆಯ 10 ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ.

2007 ರಲ್ಲಿ ಕೀನ್ಯಾ ವಿರುದ್ಧ ಕೊನೆಯ 10 ಓವರ್‌ಗಳಲ್ಲಿ 159 ರನ್ ಬಾರಿಸಿದ್ದ ಶ್ರೀಲಂಕಾ ತಂಡದ ಹೆಸರಿನಲ್ಲಿ ಈ ದಾಖಲೆ ಇತ್ತು.

ಇನ್ನು ಈ ಪಂದ್ಯದಲ್ಲಿ ಭಾರತದ ಪರ ಅಭಿಷೇಕ್ ಶರ್ಮಾ 100 ರನ್ ಗಳಿಸಿದರೆ, ರುತುರಾಜ್ ಗಾಯಕ್ವಾಡ್ ಅಜೇಯ 77 ರನ್ ಬಾರಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್ 48 ರನ್ಗಳ ಅಜೇಯ ಇನ್ನಿಂಗ್ಸ್ ಆಡಿ ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಮುರಿದರು.

ರಿಂಕು ಸಿಂಗ್ ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿ 5 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ 48 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆದರೆ, ಕೇವಲ 2 ರನ್‌ಗಳಿಂದ ಅರ್ಧಶತಕ ಪೂರೈಸುವಲ್ಲಿ ವಂಚಿತರಾದರು. ಈ 5 ಸಿಕ್ಸರ್‌ಗಳ ನೆರವಿನಿಂದ ರಿಂಕು ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಮುರಿದರು.

ವಾಸ್ತವವಾಗಿ ಅಂತರಾಷ್ಟ್ರೀಯ ಟಿ20ಯಲ್ಲಿ 19 ಮತ್ತು 20ನೇ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇದೀಗ ಸೂರ್ಯಕುಮಾರ್ ಯಾದವ್ರನ್ನು ಹಿಂದಿಕ್ಕಿರುವ ರಿಂಕು ಸಿಂಗ್ ನಾಲ್ಕನೇ ಸ್ಥಾನಕ್ಕೇರಿದ್ದಾರೆ

ಭಾರತದ ಪರ 19 ಮತ್ತು 20ನೇ ಓವರ್‌ಗಳಲ್ಲಿ 48 ಎಸೆತಗಳನ್ನು ಎದುರಿಸಿರುವ ರಿಂಕು ಸಿಂಗ್ ಟಿ20ಯಲ್ಲಿ ಒಟ್ಟು 17 ಸಿಕ್ಸರ್‌ಗಳನ್ನು ಸಿಡಿಸಿದ್ದರೆ, ಸೂರ್ಯಕುಮಾರ್ 62 ಎಸೆತಗಳಲ್ಲಿ 14 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ದಿನೇಶ್ ಕಾರ್ತಿಕ್ ಕೂಡ ಕೊನೆಯ ಎರಡು ಓವರ್‌ಗಳಲ್ಲಿ 97 ಎಸೆತಗಳನ್ನು ಎದುರಿಸಿದ್ದು, 14 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಭಾರತದ ಪರ ಕೊನೆಯ ಎರಡು ಓವರ್‌ಗಳಲ್ಲಿ 193 ಎಸೆತಗಳನ್ನು ಎದುರಿಸಿರುವ ಹಾರ್ದಿಕ್ ಪಾಂಡ್ಯ ಒಟ್ಟು 32 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.









