Jagannath Puri Rath Yatra 2024: ಪುರಿ ಜಗನ್ನಾಥ ರಥೋತ್ಸವ ವಿಶೇಷ ನಿಮ್ಮ ಮಗುವಿನ ಫೋಟೋಶೂಟ್ ಈ ರೀತಿ ಮಾಡಿಸಿ
2024ರ ಪುರಿ ಜಗನ್ನಾಥ ರಥೋತ್ಸವ ಇಂದಿನಿಂದ(ಜುಲೈ 7) ಶುರುವಾಗಲಿದೆ. ಪುರಿ ಜಗನ್ನಾಥ ರಥೋತ್ಸವ ವಿಶೇಷ ಫೋಟೋಶೂಟ್ನಲ್ಲಿ ನಿಮ್ಮ ಮನೆಯ ಪುಟಾಣಿಗಳು ಮಿಂಚಬೇಕಾದರೆ, ಇಲ್ಲಿವೆ ಕೆಲವು ಫೋಟೋಶೂಟ್ ಟಿಪ್ಸ್ಗಳು.
Updated on: Jul 07, 2024 | 11:09 AM

2024ರ ಪುರಿ ಜಗನ್ನಾಥ ರಥೋತ್ಸವ ಇಂದಿನಿಂದ(ಜುಲೈ 7) ಶುರುವಾಗಲಿದೆ. ಈ ರಥ ಯಾತ್ರೆಯು ವಾರ್ಷಿಕ ಒಂಬತ್ತು ದಿನಗಳ ವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯಂದು ನಡೆಯುವ ರಥೋತ್ಸವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಪುರಿ ಜಗನ್ನಾಥ ರಥೋತ್ಸವ ವಿಶೇಷ ಫೋಟೋಶೂಟ್ನಲ್ಲಿ ನಿಮ್ಮ ಮನೆಯ ಪುಟಾಣಿಗಳು ಮಿಂಚಬೇಕಾದರೆ, ಇಲ್ಲಿವೆ ಕೆಲವು ಫೋಟೋಶೂಟ್ ಟಿಪ್ಸ್ಗಳು.

ಜಗನ್ನಾಥ ರಥಯಾತ್ರೆಯು ವಿಸ್ತಾರವಾಗಿ ಅಲಂಕರಿಸಲ್ಪಟ್ಟ ರಥಗಳು ಮತ್ತು ಬೀದಿಯಲ್ಲಿ ಭವ್ಯವಾದ ಮೆರವಣಿಯನ್ನು ಒಳಗೊಂಡಿರುತ್ತದೆ. ಈ ಎಲ್ಲ ಥೀಮ್ ಇಟ್ಟುಕೊಂಡು ಫೋಟೋಶೂಟ್ ಮಾಡಿ.

ನಿಮ್ಮ ಮಗುವಿನ ಫೋಟೋಶೂಟ್ ಮಾಡುವಾಗ ಜಗನ್ನಾಥನ ರಥವನ್ನು ಹೋಲುವ ಪರಿಕರಗಳನ್ನು ಬಳಸಿ ಫೋಟೋಶೂಟ್ ಮಾಡಿಸಿ.

ಜಗನ್ನಾಥ, ಬಲಭದ್ರ ಮತ್ತು ಸುಭದ್ರೆ ಇರುವ ಪೋಸ್ಟರ್, ಬ್ಯಾನರ್ ಅಥವಾ ಡಿಜಿಟಕ್ ಬ್ಯಾಕ್ ಡ್ರಾಪ್ಗಳನ್ನು ಒಳಗೊಂಡ ಫೋಟೋಶೂಟ್ ಮಾಡಿಸಿ.

ಸಂಪ್ರದಾಯಿಕ ಉಡುಪುಗಳಾದ ಧೋತಿ-ಕುರ್ತಾ ಅಥವಾ ಹೆಣ್ಣು ಮಗುವಿಗೆ ಸೀರೆ, ಲಂಗ ದಾವಣಿ,ಬಳೆಗಳಂತಹ ಸಾಂಪ್ರದಾಯಿಕ ಆಭರಣಗಳಿಂದ ಅಲಂಕರಿಸಿ ಫೋಟೋಶೂಟ್ ಮಾಡಿಸಿ.




